ಪೊಲೀಸರು ಆರೋಪಿಗಳನ್ನು ಸ್ಟೇಷನ್ ಗೆ ಕರ್ಕೊಂಡು ಬಂದು ವಿಚಾರಣೆ ನಡೆಸಿ, ಕೋರ್ಟ್ ಗೆ ಪ್ರೊಡ್ಯೂಸ್ ಮಾಡ್ತಾರೆ. ಆದ್ರೆ, ಇಲ್ಲೋರ್ವ ಪೊಲೀಸ್ ಗಬ್ಬರ್ ಸಿಂಗ್ ಸಿನಿಮಾ ಸ್ಟೈಲ್ ನಲ್ಲಿ ಆರೋಪಿಗೆ ಡ್ಯಾನ್ಸ್ ಕ್ಲಾಸ್ ತಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಸ್ಟೇಷನ್ ಎಸ್ ಐ ಸೊಣ್ಣೇಗೌಡ ಆರೋಪಿ ಎದ್ರು ಡ್ಯಾನ್ಸ್ ಮಾಡಿದ್ದಾರೆ. ಯಾವ್ದೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರೆಸ್ಟ್ ಮಾಡಿ ಕರೆತಂದ ಆರೋಪಿ ಎದರು ಸ್ಟೆಪ್ ಹಾಕಿ, ನೀನು ಹೀಗೆ ಡ್ಯಾನ್ಸ್ ಮಾಡಿದ್ರೆ ಬಿಟ್ಟು ಬಿಡ್ತೀನಿ ಅಂತ ಸಿನಿಮೀಯ ರೀತಿಯಲ್ಲಿ ನಡೆಸಿಕೊಂಡಿದ್ದಾರೆ.