Saturday, September 14, 2024

ಕೊಹ್ಲಿಯನ್ನೇ ಹಿಂದಿಕ್ಕಿದ ರಣವೀರ್..!

 ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಹಿಂದಿಕ್ಕಿದ್ದಾರೆ. ಅರೇ, ವಿರಾಟ್ ಕ್ರಿಕೆಟಿಗ. ರಣವೀರ್ ನಟ. ಇವ್ರಿಬ್ರು ಒಬ್ಬರನೊಬ್ರು ಹಿಂದಿಕ್ಕೋದು ಯಾವ ವಿಷ್ಯದಲ್ಲಿ ಅನ್ನೋ ಪ್ರಶ್ನೆ ಮೂಡೋದು ಸಹಜ. ಇದು ಸಿನಿಮಾ ಮತ್ತು ಕ್ರಿಕೆಟ್ ಕಥೆಯಲ್ಲ. ಮದ್ವೆ ವಿಷ್ಯ..! ಕಳೆದ ವರ್ಷ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಗೊತ್ತೇ ಇದೆ. ಅಂದು ವಿರಾಟ್ ಎಂಗೇಜ್ಮೆಂಟ್ ಗೆ ಅನುಷ್ಕಾಗೆ ಬರೋಬ್ಬರಿ 1 ಕೋಟಿ ರೂ ಮೌಲ್ಯದ ಉಂಗುರ ತೊಡಿಸಿದ್ರು. ಈಗ ರಣವೀರ್ ದೀಪಿಕಾಗೆ ತೊಡಿಸಿರೋ ರಿಂಗ್ ಬೆಲೆ ಬರೋಬ್ಬರಿ 1.3 ಕೋಟಿ ರೂ ನಿಂದ 2.7 ಕೋಟಿ ರೂವರೆಗೆ ಇರ್ಬಹುದು ಅಂತ ಹೇಳಲಾಗ್ತಿದೆ. ಹೀಗೆ ಪತ್ನಿಗೆ ಉಂಗುರ ತೊಡಿಸೋ ವಿಷ್ಯದಲ್ಲಿ ರಣವೀರ್ ವಿರಾಟ್ ಗಿಂತಾ ಒಂದು ಹೆಜ್ಜೆ ಮುಂದಿದ್ದಾರೆ..!

RELATED ARTICLES

Related Articles

TRENDING ARTICLES