ಪಬ್ ಜಿ, ಬಹುಶಃ ಈ ಹೆಸ್ರು ಕೇಳ್ದೇ ಇರೋರು ಬಹಳಾ ಕಮ್ಮಿ ಅನ್ಸುತ್ತೆ. ಪಬ್ ಜಿ ಅನ್ನೋ ಮೊಬೈಲ್ ಗೇಮ್ ನಲ್ಲಿ ಬಹುತೇಕ ಯುವಕರು ಕಳೆದು ಹೋಗಿದ್ದಾರೆ. ಇದು ಸಿಕ್ಕಾಪಟ್ಟೆ ಕಿಕ್ ಕೊಡುತ್ತೆ, ಥ್ರಿಲ್ ನೀಡುತ್ತೆ ಅನ್ನೋದು ಈ ಗೇಮ್ ಆಡೋರ ಒಪಿನಿಯನ್. ಈ ಪಬ್ ಜಿ ಟೀಮ್ ಇಂಡಿಯಾ ಪ್ಲೇಯರ್ ಗಳಿಗೂ ಕಿಕ್ ನೀಡಿದೆ..! ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಟೂರ್ ಗೆ ಫ್ಲೈಟ್ ಹತ್ತೋ ಬದಲು ಪಬ್ ಜಿಯಲ್ಲಿ ಬ್ಯುಸಿ ಆಗಿರೋ ಫೋಟೋ ವೈರಲ್ ಆಗಿದೆ.
ಫ್ಲೈಟ್ ಡಿಲೇ ಆಗಿದ್ರಿಂದ ಮನೀಷ್ ಪಾಂಡೆ ಮತ್ತು ಕೃನಾಲ್ ಪಾಂಡ್ಯ ಪಬ್ ಜಿ ಆಡೋದ್ರಲ್ಲಿ ಬ್ಯುಸಿ ಆಗಿದ್ರು. ಕೆ.ಎಲ್ ರಾಹುಲ್ ಮಸಾಜ್ ಮಾಡಿಸಿಕೊಳ್ತಾ ರಿಲ್ಯಾಕ್ಸ್ ಮೂಡಿಗೆ ಜಾರಿದ್ರು. ಇದನ್ನು ಬಿಸಿಸಿಐ ಟ್ವೀಟ್ ನಲ್ಲಿ ಶೇರ್ ಮಾಡಿಕೊಂಡಿದೆ. ಅಂದಹಾಗೆ ಎಂ.ಎಸ್ ಧೋನಿ ಹೇಳೋ ಪ್ರಕಾರ ವಿರಾಟ್ ಕೊಹ್ಲಿ ಎಲ್ರಿಗಿಂಥಾ ಸಖತ್ತಾಗಿ ಪಬ್ ಜಿ ಆಡ್ತಾರಂತೆ..! ವಿರಾಟ್ ಬರ್ತ್ ಡೇ ದಿನ ಧೋನಿ ಹ್ಯಾಪಿ ಬರ್ತ್ ಡೇ ಪಬ್ ಜಿ ಫ್ಯಾನ್ ಅಂತ ವಿಶ್ ಮಾಡಿದ್ರು. ಜೊತೆಗೆ ಪಾಂಡೆಗೆ ಹೇಳಿಕೊಡಿ ಅಂತ ಧೋನಿ ತಮಾಷೆ ಮಾಡಿದ್ರು.