Thursday, April 25, 2024

#JerseyKnowsNoGender ಅಭಿಯಾನ ಶುರುಮಾಡಿದ ಕೊಹ್ಲಿ..!

ಟೀಮ್ ಇಂಡಿಯಾ ಕ್ಯಾಪ್ಟನ್ #JerseyKnowsNoGender ಅಭಿಯಾನ ಶುರು ಮಾಡಿದ್ದಾರೆ. ಏನಿದು ಅಭಿಯಾನ..? ಯಾಕಾಗಿ ಕೊಹ್ಲಿ ಈ ಕ್ಯಾಂಪೇನ್ ಆರಂಭಿಸಿದ್ದಾರೆ ಅಂತ ಕೇಳ್ತಿದ್ದೀರಾ..?
ನಿಮ್ಗೆ ಗೊತ್ತೇ ಇದೆ, ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರೋ ಮಹಿಳಾ ವರ್ಲ್ಡ್ ಕಪ್ ನಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ ಒಳ್ಳೆಯ ಪ್ರದರ್ಶನ ನೀಡ್ತಿದೆ. ಸತತವಾಗಿ ನ್ಯೂಜಿಲೆಂಡ್, ಪಾಕಿಸ್ತಾನ್ ಮತ್ತು ಐರ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.
ವರ್ಲ್ಡ್ ಕಪ್ ಗೆಲ್ಲೋ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರೋ ಭಾರತೀಯ ವನಿತೆಯರಿಗೆ ಬಹಳಷ್ಟು ಮಂದಿ ವಿಶ್ ಮಾಡ್ತಿದ್ದಾರೆ. ಅಂತೆಯೇ ಟೀಮ್ ಇಂಡಿಯಾ ಕ್ಯಾಪ್ಟನ್, ರನ್ ಮಷಿನ್ ಕೊಹ್ಲಿ ಕೂಡ ಕೌರ್ ಪಡೆಗೆ ಶುಭಕೋರಿದ್ದಾರೆ.
ಕ್ರೀಡೆಯಲ್ಲಿ ಸಮಾನತೆ ಸಾರೋಕೆ ಅಂತ ಕೊಹ್ಲಿ #JerseyKnowsNoGender ಅಭಿಯಾನ ಪ್ರಾರಂಭಿಸಿದ್ದಾರೆ. ನಮ್ಮ ಹುಡ್ಗೀರ ಬಗ್ಗೆ ಹೆಮ್ಮೆ ಇದೆ. ಜೆರ್ಸಿ ಧರಿಸಿ ದೇಶವನ್ನು ಪ್ರತಿನಿಧಿಸೋದು ನಿಜಕ್ಕೂ ಹೆಮ್ಮೆಯ ವಿಷ್ಯ. ಜೆರ್ಸಿಗೆ ಯಾವ್ದೇ ಗಂಡು-ಹೆಣ್ಣು ಅನ್ನೋ ಬೇಧ ಇಲ್ಲ ಅಂತ ಹೇಳಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾ ಮೂಲಕ #JerseyKnowsNoGender ಅಭಿಯಾನ ಆರಂಭ ಮಾಡಿದ್ದಾರೆ ಕೊಹ್ಲಿ..!

RELATED ARTICLES

Related Articles

TRENDING ARTICLES