Saturday, April 20, 2024

ವಿರಾಟ್, ರೋಹಿತ್ ಗಿಂತಲೂ ಮಿಥಾಲಿ ರಾಜ್ ಬೆಸ್ಟ್..!

ಭಾರತ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ (ಒಡಿಐ, ಟೆಸ್ಟ್), ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗಿಂತಲೂ ಬೆಸ್ಟ್ ಅನಿಸಿಕೊಂಡಿದ್ದಾರೆ.
ಟಿ-20 ವರ್ಲ್ಡ್ ಕಪ್ ನ ಐರ್ಲೆಂಡ್​ ವಿರುದ್ಧದ ಮ್ಯಾಚ್ ನಲ್ಲಿ ಹಾಫ್ ಸೆಂಚುರಿ ಸಿಡಿಸಿದ ಮಿಥಾಲಿ ರಾಜ್​, ವಿಶ್ವದ ಬೆಸ್ಟ್​ ಟಿ-20 ಆಟಗಾರ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಯಾನದ ಪ್ರಾವಿಡೆನ್ಸ್​​ ಮೈದಾನದಲ್ಲಿ ನಡೆದ ಮ್ಯಾಚ್ ನಲ್ಲಿ 56 ಬಾಲ್ ಗಳಲ್ಲಿ 4 ಬೌಂಡರಿ 1 ಸಿಕ್ಸರ್​ ಸಹಿತ 51 ರನ್​ಗಳಿಸಿದ ಮಿಥಾಲಿ ಟಿ20ಯಲ್ಲಿ ಹೆಚ್ಚು ರನ್​ ಸಿಡಿಸಿದ ಪ್ಲೇಯರ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ರು.
ಇಂಟರ್​ನ್ಯಾಷನಲ್​ ಟಿ-20ಯಲ್ಲಿ ಹೆಚ್ಚು ರನ್​ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 2,271 ರನ್​ಗಳೊಂದಿಗೆ ಇಷ್ಟು ದಿನ ನ್ಯೂಜಿಲೆಂಡ್​​ನ ಮಾರ್ಟಿನ್​ ಗಪ್ಟಿಲ್​ ಅಗ್ರಸ್ಥಾನದಲ್ಲಿದ್ರು. ಇದೀಗ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 17ನೇ ಟಿ-20 ಹಾಫ್​ಸೆಂಚುರಿ​ ಸಿಡಿಸಿದ ಮಿಥಾಲಿ 2,283 ರನ್​ಗಳೊಂದಿಗೆ ಮಿಥಾಲಿರಾಜ್​ ಅಗ್ರಸ್ಥಾನಕ್ಕೇರಿದ್ದಾರೆ.
ಸದ್ಯ ಟಿ-20 ಮಾದರಿಯಲ್ಲಿ ಹೆಚ್ಚು ರನ್​ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಮಿಥಾಲಿ ಅಗ್ರಸ್ಥಾನ ಅಲಂಕರಿಸಿದ್ರೆ, ನ್ಯೂಜಿಲೆಂಡ್​ನ ಮಾರ್ಟಿನ್​ ಗಫ್ಟಿಲ್​ 2ನೇ ಸ್ಥಾನಕ್ಕೆ ಇಳಿದಿದ್ದಾರೆ. ಇನ್ನು 2,207 ರನ್​ಗಳೊಂದಿಗೆ ಭಾರತದ ರೋಹಿತ್​ ಶರ್ಮಾ 3ನೇ ಸ್ಥಾನದಲ್ಲಿದ್ದಾರೆ.

T-20I ಮಾದರಿಯಲ್ಲಿ ಹೆಚ್ಚು ರನ್​ ಸಿಡಿಸಿದ ಆಟಗಾರರು
                       ಇನ್ನಿಂಗ್ಸ್​             ರನ್​
ಮಿಥಾಲಿ ರಾಜ್          80               2283
ಮಾರ್ಟಿನ್​ ಗಪ್ಟಿಲ್       73              2271
ರೋಹಿತ್ ಶರ್ಮಾ       80              2207
ಇನ್ನು, ಟಿ-20 ಮಾದರಿಯಲ್ಲಿ ಹೆಚ್ಚು ರನ್​ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲೂ ಮಿಥಾಲಿ ರಾಜ್​ಗೆ ಅಗ್ರಸ್ಥಾನ.
T-20I ಮಾದರಿಯಲ್ಲಿ ಹೆಚ್ಚು ರನ್​ ಸಿಡಿಸಿದ ಭಾರತೀಯರು
                         ಇನ್ನಿಂಗ್ಸ್​          ರನ್​
ಮಿಥಾಲಿ ರಾಜ್           80            2283
ರೋಹಿತ್​ ಶರ್ಮಾ        80            2207
ವಿರಾಟ್​ ಕೊಹ್ಲಿ           58            2102
ಹರ್ಮನ್​ಪ್ರೀತ್​ ಕೌರ್​    80            1827
ಸುರೇಶ್​​ ರೈನಾ          66           1605
ಎಮ್​.ಎಸ್​​ ಧೋನಿ      80            1487

ವಸಂತ್​ ಮಳವತ್ತಿ. ಸ್ಪೋರ್ಟ್ಸ್​​ ಬ್ಯೂರೋ. ಪವರ್​ಟಿವಿ

RELATED ARTICLES

Related Articles

TRENDING ARTICLES