ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಲ್ಲಿ ನವರಸ ನಾಯಕ ಜಗ್ಗೇಶ್ ಮನವಿಯೊಂದನ್ನು ಮಾಡಿದ್ದಾರೆ.
ಜಗ್ಗೇಶ್ ಅಭಿನಯಿಸಿರೋ 8ಎಂಎಂ ಬುಲೆಟ್ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರ ಜೊತೆ ಚಿತ್ರವನ್ನು ವೀಕ್ಷಿಸಿದ ಜಗ್ಗೇಶ್ ಮತ್ತಷ್ಟು ವಿಭಿನ್ನ ಪಾತ್ರಗಳನ್ನು ಮಾಡೋದಾಗಿ ಹೇಳಿದ್ದಾರೆ.
ಯುವಪೀಳಿಗೆಗೆ ಸೇರಿರೋ ದರ್ಶನ್, ಯಶ್, ಸುದೀಪ್, ಪುನೀತ್ ಸಿನಿಮಾರಂಗವನ್ನು ಬೆಳೆಸ್ತಾ ಇದ್ದಾರೆ. ಇವರು ತಮ್ಮ ಚಿತ್ರಗಳಲ್ಲಿ ಹಿರಿಯರಿಗೆ ಅವಕಾಶ ಕೊಡ್ಬೇಕು ಅಂತ ಮನವಿ ಮಾಡಿದ್ದಾರೆ.