ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೆ ಮದ್ವೆ ಆಗಿದೆ. ಇಟಲಿಯಲ್ಲಿ ಅದ್ಧೂರಿಯಾಗಿ ದೀಪಿಕಾ-ರಣವೀರ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿತೈಷಿಗಳು, ಫ್ರೆಂಡ್ಸ್, ಫ್ಯಾನ್ಸ್, ಬೇರೆ ಬೇರೆ ಕ್ಷೇತ್ರದ ಗಣ್ಯರು ನವ ಜೋಡಿಗೆ ವಿಶ್ ಮಾಡ್ತಿದ್ದಾರೆ. ಅಂತೆಯೇ ಕಾಂಡೋಮ್ ಕಂಪೆನಿಯೊಂದು ಕೂಡ ವಿಶ್ ಮಾಡಿದೆ..!
ಡ್ಯೂರೆಕ್ಸ್ ಅನ್ನೋ ಕಾಂಡೋಮ್ ಕಂಪೆನಿ ದೀಪಿಕಾ-ರಣವೀರ್ ಗೆ ಟ್ವೀಟ್ ಮೂಲಕ ವಿಶ್ ಮಾಡಿದೆ. ಸಿಂಗ್ ಲೇಡಿಸ್ ಹಾಡಿಗೆ ಟ್ವಿಸ್ಟ್ ನೀಡಿ ನಿಮ್ಮನ್ನು ಸುತ್ತುವರೆಸಿದ್ದೇವೆ ಅಂತ ಹೇಳಿದೆ. ‘ದೀಪಿಕಾ-ರಣವೀರ್ ಅಧಿಕೃತವಾಗಿ ಅದರ ಮೇಲೆ ರಿಂಗ್ ಹಾಕಿಕೊಳ್ಳೋದಕ್ಕೆ ಶುಭಾಶಯಗಳು” ಅಂತ ಟ್ವೀಟ್ ಮಾಡಿದೆ.
We've got you covered. 😉 #DeepVeer #DeepVeerKiShaadi pic.twitter.com/eRL4MnSEXC
— Durex India (@DurexIndia) November 14, 2018
ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಮದುವೆ ಆದಾಗ ಕೂಡ ಈ ಕಂಪೆನಿ ಹೀಗೆ ವಿಭಿನ್ನವಾಗಿ ವಿಶ್ ಮಾಡಿತ್ತು. ಅಂದು ವಿರಾಟ್ ಮತ್ತು ಅನುಷ್ಕಾಗೆ ಶುಭಕೋರಿದ್ದ ಡ್ಯೂರೆಕ್ಸ್ ”ನಿಮ್ಮ ನಡುವೆ ಡ್ಯೂರೆಕ್ಸ್ ಬಿಟ್ಟು ಏನೂ ಬರದೇ ಇರಲಿ” ಅಂತ ಹೇಳಿತ್ತು.
Finally, Virat Kohli bowled his maiden over. #VirushkaKiShadi pic.twitter.com/skZWdcn20y
— Durex India (@DurexIndia) December 12, 2017