Monday, April 22, 2024

ಆ್ಯಕ್ಷನ್ ಪ್ರಿನ್ಸ್ ಮ್ಯಾರೇಜ್ ಫಿಕ್ಸ್..! ಧ್ರುವ ಮದ್ವೆ ಆಗ್ತಿರೋ ಹುಡ್ಗಿ ಯಾರ್ ಗೊತ್ತಾ..?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮ್ಯಾರೇಜ್ ಫಿಕ್ಸ್ ಆಗಿದೆ. ಸ್ಯಾಂಡಲ್ ವುಡ್ ನ ಬಹು ಬೇಡಿಕೆ ಧ್ರುವ ನಟಿಸಿದ ಅದ್ಧೂರಿ, ಬಹುದ್ದೂರ್ ಮತ್ತು ಭರ್ಜರಿ ಮೂರೂ ಸಿನಿಮಾಗಳು ಕೂಡ ಹಿಟ್ ಆಗಿವೆ. ಈಗ ಧ್ರವಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ನಾನು ಮದ್ವೆ ಆಗೋದಿದ್ರೆ ಲವ್ ಮಾಡಿದ ಹುಡ್ಗಿಯನ್ನೇ ಆಗೋದು ಅಂತ ಹೇಳ್ತಿದ್ದ ಧ್ರುವ, ಪ್ರೀತಿಸಿದ ಹುಡ್ಗಿಯನ್ನೇ ಮದ್ವೆ ಆಗ್ತಿದ್ದಾರೆ.

ಅಂದಹಾಗೆ ಧ್ರುವ ಮದ್ವೆ ಆಗ್ತಿರೋ ಹುಡ್ಗಿ ಪ್ರೇರಣಾ ಶಂಕರ್ ಅಂತ. ಪ್ರೇರಣಾ, ಧ್ರುವ ಅವ್ರ ಪಕ್ಕದ್ಮನೆ ಹುಡ್ಗಿ. ಬಹುಕಾಲದಿಂದ ಇವ್ರಿಬ್ರು ಪ್ರೀತಿಸ್ತಾ ಇದ್ದು, ಇದೀಗ ದಾಂಪತ್ಯಕ್ಕೆ ಕಾಲಿಡೋಕೆ ರೆಡಿಯಾಗಿದ್ದಾರೆ. ಡಿಸೆಂಬರ್ 9ದು ಬೆಂಗಳೂರಿನ ಬನಶಂಕರಿಯಲ್ಲಿರೋ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ. ಅಂದೇ ಮ್ಯಾರೇಜ್ ಡೇಟ್ ಫಿಕ್ಸ್ ಆಗಲಿದೆ.

 

 

RELATED ARTICLES

Related Articles

TRENDING ARTICLES