ತುಮಕೂರು : ಮಕ್ಕಳಿಗೆ ಪ್ರೀತಿಯಿಂದ ಹೇಳಿ ಕೊಡ್ಬೇಕು. ಅದನ್ನು ಬಿಟ್ಟು ಮಕ್ಕಳಿಗೆ ಬರಲ್ಲ ಅಂತ ಬೇರೆ ಮಕ್ಕಳ ಎದುರು ಬೈಯೋದು, ಹೀಯಾಳಿಸೋದು ಮಾಡಬಾರ್ದು.ಹಾಗೆಯೇ ಹಿಗ್ಗಾಮುಗ್ಗ ಥಳಿಸಲೂ ಬಾರ್ದು. ತುಮಕೂರಿನಲ್ಲಿ ವಿದ್ಯಾರ್ಥಿ ಇಂಗ್ಲಿಷ್ ಪದ್ಯ ಹೇಳಿಲ್ಲ ಅಂತ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮಧುಗಿರಿ ತಾಲೂಕಿನ ಬ್ಯಾಲ್ಯದ ಸರ್ಕಾರಿ ಶಾಲೆ ಶಿಕ್ಷಕಿ ಸೌಮ್ಯ ತನ್ನ ಸ್ಟೂಡೆಂಟ್ ಗೆ ಮನ ಬಂದಂತೆ ಹೊಡೆದವರು. ಇಂಗ್ಲಿಷ್ ಪದ್ಯ ಹೇಳೋಕೆ ಹೇಳಿದ್ದಾರೆ. ಆಗ ಬಾಲಕ ಸರಿಯಾಗಿ ಹೇಳ್ಲಿಲ್ಲ. ಇದ್ರಿಂದ ಕೋಪಗೊಂಡ ಶಿಕ್ಷಕಿ ಬೆತ್ತದಿಂದ ಮೈ ಎಲ್ಲಾ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಒಂದನೇ ತರಗತಿ ವಿದ್ಯಾರ್ಥಿ ಶಿಕ್ಷಕಿಯಿಂದ ಗಾಯಗೊಂಡು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾನೆ.