ಸ್ಯಾಂಡಲ್ ವುಡ್ ನಲ್ಲಿ ಮೀ ಟೂ ಅಭಿಯಾನ ಭಾರೀ ಸಂಚನಲ ಉಂಟು ಮಾಡಿದೆ. ಶ್ರುತಿ ಹರಿಹರನ್ ಸೇರಿದಂತೆ ಒಂದಿಷ್ಟು ಮಂದಿ ನಟಿಯರು ತಮಗಾದ ಕೆಟ್ಟ ಅನುಭವ ಹೇಳಿಕೊಂಡಿದ್ರು. ಇದ್ರ ಬೆನ್ನಲ್ಲೇ ಇದೀಗ ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ನಂಗೂ ಮೀ ಟೂ ಅನುಭವ ಆಗಿದೆ ಅಂತ ಹೇಳಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರೋ ಮೀ ಟೂ ಅನುಭವ ನನ್ನ ಕಾಲದಲ್ಲಿ ನಾನೂ ಅನುಭಿವಿಸದ್ದೇನೆ. ನನ್ನ ಆತ್ಮಚರಿತ್ರೆಯಲ್ಲಿ ‘ಕಣ್ಣಾಮುಚ್ಚೆ ಕಾಡೇಗೂಡೆ’ ಪುಸ್ತಕದಲ್ಲಿ ಹೇಳಿದ್ದನೆ ಅಂತ ಅವರು ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಅವರು, ಮೀ ಟೂ ಅನುಭವವನ್ನು ಹೇಳಿಕೊಂಡು ಏನು ಪ್ರಯೋಜನ. ಆ ಕೆಟ್ಟ ಅನುಭವ, ಇಬ್ಬರಿಗೆ ಮಾತ್ರ ಗೊತ್ತಿರುತ್ತೆ. ತಾಯಿಗೆ ಮಗುವಾದ್ರೆ ತಂದೆ ಯಾರೆಂದು ತಾಯಿಗೆ ಮಾತ್ರ ತಿಳಿದಿರುತ್ತೆ ಹೊರತು ಸ್ವತಃ ತಂದೆಗೂ ಗೊತ್ತಾಗಿರಲ್ಲ ಅಂತ ಹೇಳಿದ್ರು.
ಫೇಸ್ ಬುಕ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸೋ ಮುನ್ನ ಅದಕ್ಕೊಂದು ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು. ಮೀಟೂ ಘಟನೆಗೆ ಸಂಬಂಧಿಸಿದಂತೆ ಎಷ್ಟರ ಮಟ್ಟಿಗೆ ಸಾಕ್ಷಿ ಒದಗಿಸುತ್ತೀರ ಅನ್ನೋದು ಪ್ರಶ್ನೆಯಾಗಿದೆ. ಅತ್ಯಾಚಾರವಾಗಿದೆ ಅಂದ್ರೆ ಪೊಲೀಸರು ಎಷ್ಟೊಂದು ಪ್ರಶ್ನೆ ಕೇಳುತ್ತಾರೆ..? ಆಗ ಮನಸ್ಸಿಗೆ ನೋವಾಗುತ್ತೆ ಅಂತ ಹೇಳಿದ್ರು.
ನನ್ನಂತಹ ಸ್ಥಿತಿಗೆ ಬೇರೆಯವರಿಗೆ ಬರಬಾರದು ಅಂತ ನನ್ನ ಆತ್ಮಚರಿತ್ರೆಯನ್ನು ಬರೆದಿದ್ದೇನೆ. ಇಂತಹ ಘಟನೆಗಳಿಂದ ಎಚ್ಚೆತ್ತುಕೊಳ್ಳಿ ಅಂತ ಅಲ್ಲಿ ತಿಳಿಸಿದ್ದೇನೆ. ಗಂಡಿಗೂ ಮತ್ತು ಹೆಣ್ಣಿಗೂ ನ್ಯಾಯ ಸಿಗಬೇಕಿದ್ದು, ಇಂತಹ ಘಟನೆಗಳು ಅನುಭವಕ್ಕೆ ಬರುವ ಮುನ್ನವೇ ವಯಸ್ಸು ಮೀರಿ ಹೋಗಿರುತ್ತದೆ ಅಂತ ವಿಷಾದಿಸಿದರು.
https://youtu.be/AGGZXn7Xp48