Friday, April 26, 2024

ಕೌರ್ ಪಡೆ ಚಿತ್ತ ಸೆಮಿಫೈನಲ್ ನತ್ತ..!

ಮಹಿಳಾ ಟಿ-20 ವರ್ಲ್ಡ್ ಕಪ್ ನಲ್ಲಿ ಆಡಿದ 2 ಮ್ಯಾಚ್ ಗಳಲ್ಲೂ ಗೆದ್ದಿರೋ ಹರ್ಮನ್​ಪ್ರೀತ್​ ನಾಯಕತ್ವದ ಟೀಮ್​ಇಂಡಿಯಾ ಇಂದು ನಡೆಯೋ ಮ್ಯಾಚ್ ನಲ್ಲಿ ಗೆದ್ದು ಸೆಮಿಫೈನಲ್ ​ತಲುಪವ ಕಡೆಗೆ ಚಿತ್ತ ನೆಟ್ಟಿದೆ. ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯೋ ಮ್ಯಾಚ್ ನ ಲ್ಲಿ ಭಾರತೀಯ ವುಮೆನ್ಸ್ ಟೀಮ್ ಐರ್ಲೆಂಡನ್ನು ಸೋಲಿಸುವ ತವಕದಲ್ಲಿದೆ.
ಭಾರತದ ಬಿ ಗುಂಪಿನ ಫಸ್ಟ್ ಮ್ಯಾಚ್ ಇದೇ ಫೀಲ್ಡ್ ನಲ್ಲಿ ನಡೆದಿತ್ತು. ಆ ಮ್ಯಾಚ್ ನಲ್ಲಿ ಕ್ಯಾಪ್ಟನ್ ಕೌರ್​​ ಅಬ್ಬರದ ಸೆಂಚುರಿ ಸಿಡಿಸಿದ್ರು. 2ನೇ ಮ್ಯಾಚ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ 7 ವಿಕೆಟ್​​​ಗಳ ಜಯ ಸಾಧಿಸಿತ್ತು. ಗುಂಪು ವಿಭಾಗದಲ್ಲಿ ಇಂದಿನ ಪಂದ್ಯ ಸೇರಿದಂತೆ 2 ಮ್ಯಾಚ್​ಗಳು ಬಾಕಿ ಇದ್ದು, ಒಂದರಲ್ಲಿ ಗೆದ್ದರೂ ಭಾರತ ಸೆಮೀಸ್​ ತಲುಪುವುದು ಖಚಿತ.
ಇದಕ್ಕೆ ತದ್ವಿರುದ್ಧವಾಗಿ ಲಾರಾ ಡೆಲೆನಿ ನಾಯಕತ್ವದ ಐರ್ಲೆಂಡ್ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳೆದುರು ನಡೆದಿದ್ದ ಮೊದಲ 2 ಮ್ಯಾಚ್ ಗಳಲ್ಲಿ ಸೋಲನುಭವಿಸಿದೆ. ಆದ್ರೆ, ಸೋಲಿನಲ್ಲೂ ಹೋರಾಟದ ಮನೋಭಾವವನ್ನು ಹೊಂದಿರೋ ಐರ್ಲೆಂಡ್​ ವಿರುದ್ಧ ಹರ್ಮನ್​ ಬಳಗ ಎಚ್ಚರಿಕೆಯಿಂದ ಆಡಬೇಕಿದೆ.
ಭಾರತದಲ್ಲಿ ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್, ನಾಯಕಿ ಹರ್ಮನ್​ಪ್ರೀತ್​ ಕೌರ್, ಅನುಭವಿ ಆಟಗಾರ್ತಿ ಮಿಥಾಲಿ ರಾಜ್, ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ ಬೆಸ್ಟ್​​ ಪಫಾರ್ಮೆನ್ಸ್​ ನೀಡ್ತಾ ಇದ್ದಾರೆ. ಆದ್ರೆ ​ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಉತ್ತಮ ಲಯ ಕಂಡುಕೊಳ್ಳಬೇಕಿದೆ. ಬೌಲಿಂಗ್​ ವಿಭಾಗದಲ್ಲಿ ಯುವ ಪ್ರತಿಭೆ ದಯಾಳನ್ ಹೇಮಲತಾ ಮತ್ತು ಪೂನಂ ಯಾದವ್ ಐರ್ಲೆಂಡ್​ ಪಾಳಯವನ್ನು ಕಾಡಲು ಸಜ್ಜಾಗಿದ್ದಾರೆ.
ಕ್ಲಾರೆ ಶಿಲ್ಲಿಂಗ್ಟನ್, ಗ್ಯಾಬಿ ಲೂಯಿಸ್ ಐರ್ಲೆಂಡ್​ ಪಾಳಯದ ಬ್ಯಾಟಿಂಗ್​ ಬಲವಾಗಿದ್ರೆ, ಲೂಸಿ ಒರೇಲಿ, ಕೈರಾ ಮೆಟ್​ಕ್ಲಾಫೆ ಬೌಲಿಂಗ್​ ಶಕ್ತಿಯಾಗಿದ್ದಾರೆ,
-ವಸಂತ್​ ಮಳವತ್ತಿ. ಸ್ಪೋರ್ಟ್ಸ್​​ ಬ್ಯೂರೋ. ಪವರ್​ ಟಿವಿ

RELATED ARTICLES

Related Articles

TRENDING ARTICLES