ತುಮಕೂರು : ತುಮಕೂರು ಮಾಜಿ ಮೇಯರ್ ರವಿಕುಮಾರ್ ಕೊಲೆ ಹಿಂದೆ ಸೈಲೆಂಟ್ ಸುನೀಲನ ಕೈವಾಡ ಇದ್ಯಾ ಅನ್ನೋ ಶಂಕೆ ಎದುರಾಗಿದೆ. ಸೆಪ್ಟೆಂಬರ್ 30ರಂದು ಟೆಂಪೋದಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರವಿ ಅವ್ರನ್ನ ಕೊಚ್ಚಿ ಹತ್ಯೆ ಮಾಡಿದ್ದರು.
ಪ್ರಕರಣದ ಆರೋಪಿಗಳಾದ ಲಕ್ಷ್ಮೀನಾರಾಯಣ ಅಲಿಯಾಸ್ ಲಕ್ಷ್ಮೀ ಹಾಗೂ ಸಹಚರರ ಜೊತೆ ಸೈಲೆಂಟ್ ಸುನೀಲ ಮಾತುಕತೆ ನಡೆಸಿದ್ದ ಎನ್ನಲಾದ ಸಿಸಿಟಿವಿ ಫೂಟೇಜ್ ಪೊಲೀಸ್ರಿಗೆ ಸಿಕ್ಕಿದೆ. ತುಮಕೂರಿನ ಡಾಬಾವೊಂದ್ರಲ್ಲಿ ಕುಳಿತು ಸುನೀಲ ಸಹಚರ ಸುಜಯ್ ಜೊತೆ ಮೀಟಿಂಗ್ ಮಾಡಿದ್ದ ಅಂತ ಹೇಳಲಾಗ್ತಿದೆ. ಇದ್ರಿಂದ ರವಿ ಕೊಲೆ ಹಿಂದೆ ಸೈಲೆಂಟ್ ಸುನೀಲನ ಕೈವಾಡ ಇದೆ ಅಂತ ಹೇಳಲಾಗಿದ್ದು, ಸಿಸಿಬಿ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ತುಮಕೂರು ಮಾಜಿ ಮೇಯರ್ ಕೊಲೆ ಹಿಂದಿದ್ಯಾ ಸೈಲೆಂಟ್ ಸುನೀಲನ ಕೈವಾಡ..?
TRENDING ARTICLES