Saturday, November 16, 2024

ಸಚಿನ್ ಫಸ್ಟ್ ಇಂಟರ್ ನ್ಯಾಷನಲ್ ಮ್ಯಾಚ್ ಗೆ 29 ವರ್ಷ..!

ಅದು 1989 ನವೆಂಬರ್ 15, ಅಂದ್ರೆ ಇಂದಿಗೆ ಸರಿಯಾಗಿ 29 ವರ್ಷ.. ಇಂದಿನ ಆ ದಿನ ಭಾರತ ಮತ್ತು ಪಾಕಿಸ್ತಾನ್ ನಡುವಿನ ಟೆಸ್ಟ್ ಮ್ಯಾಚ್ ಗೆ ಕರಾಚಿ ವೇದಿಕೆಯಾಗಿತ್ತು. ಆ ಮ್ಯಾಚ್ ಮೂಲಕ 16ರ ಪೋರ ಇಂಟರ್ ನ್ಯಾಷನಲ್ ಕ್ರಿಕೆಟ್ ಗೆ ಎಂಟ್ರಿಕೊಟ್ಟಿದ್ದ..! ಆದ್ರೆ, ಅಂದು ಯಾರೂ ಊಹಿಸಿರಲಿಕ್ಕಿಲ್ಲ..ಈತ ಮುಂದೆ ಕ್ರಿಕೆಟ್ ದೇವರು ಆಗ್ತಾನೆ ಅಂತ..!
ಯಸ್​..! ಕ್ರಿಕೆಟ್​ ದೇವರು, ಮಾಸ್ಟರ್​ ಬ್ಲಾಸ್ಟರ್ ​ಸಚಿನ್​ ತೆಂಡೂಲ್ಕರ್​ ತನ್ನ ಮೊದಲ ಇಂಟರ್ ನ್ಯಾಷನಲ್ ಮ್ಯಾಚ್ ಆಡಿ ಇಂದಿಗೆ ಭರ್ತಿ 29 ವರ್ಷ. ನವೆಂಬರ್ 15, 1989ರಲ್ಲಿ ಕರಾಚಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್​​ ಮ್ಯಾಚ್ ನಲ್ಲಿ ಸಚಿನ್​ ಪದಾರ್ಪಣೆ ಮಾಡಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ದ ಸಚಿನ್​ 15 ರನ್​ಗಳಿಸಿ ವಕಾರ್​​ ಯೂನಿಸ್​ ಎಸೆದ ಬಾಲ್ ನಲ್ಲಿ ಬೌಲ್ಡ್​​ ಆಗಿದ್ರು. ವಿಶೇಷ ಅಂದ್ರೆ ವಕಾರ್​ ಯೂನಿಸ್​ ಪಾಲಿಗೂ ಅದು ಡೆಬ್ಯುಟ್ ಮ್ಯಾಚ್..!
ಅಂದಿನಿಂದ ​ಸುದೀರ್ಘ 24 ವರ್ಷಗಳಕಾಲ ಇಂಟರ್ ನ್ಯಾಷನಲ್ ಕ್ರಿಕೆಟ್​ಗೆ ಸೇವೆ ಸಲ್ಲಿಸಿದ ಸಚಿನ್ 2013ರ ನವೆಂಬರ್ 14ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ರು. ಇಂದಿಗೂ ಲೆಕ್ಕವಿಲ್ಲದಷ್ಟು ರೆಕಾರ್ಡ್ ಗಳು ಸಚಿನ್ ಹೆಸ್ರಲ್ಲೇ ಚಿರವಾಗಿ ಉಳಿದಿವೆ. ಟೆಸ್ಟ್​ ಮಾದರಿಯಲ್ಲಿ 200 ಮ್ಯಾಚ್ ಗಳನ್ನಾಡಿ 51 ಸೆಂಚುರಿ, 68 ಹಾಫ್ ಸೆಂಚುರಿಗಳಿಂದ 15,921 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಒಡಿಐ ಮಾದರಿಯಲ್ಲಿ 49 ಸೆಂಚುರಿ, 96 ಹಾಫ್ ಸೆಂಚುರಿ ಸಿಡಿಸಿ 18,426 ರನ್​ಗಳು ಸಚಿನ್​ ಬ್ಯಾಟ್​ನಿಂದ ಬಂದಿವೆ.

https://www.youtube.com/watch?v=wyBg_YTiq0g&feature=youtu.be

-ವಸಂತ್​ ಮಳವತ್ತಿ. ಸ್ಪೋರ್ಟ್ಸ್​​ ಬ್ಯೂರೋ. ಪವರ್​ ಟಿವಿ

RELATED ARTICLES

Related Articles

TRENDING ARTICLES