2019ರ ಗಣರಾಜ್ಯೋತ್ಸವಕ್ಕೆ ಚೀಫ್ ಗೆಸ್ಟ್ ಆಗಿ ಬನ್ನಿ ಅಂತ ಅಮೆರಿಕಾ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಅವ್ರಿಗೆ ಆಹ್ವಾನ ನೀಡಲಾಗಿತ್ತು. ಆದ್ರೆ, ಟ್ರಂಪ್ ಬರಲ್ಲ ಅಂತ ಕೈಕೊಟ್ಟಿದ್ರು. ಇವ್ರ ಬದಲಾಗಿ ದಕ್ಷಿಣ ಆಫ್ರಿಕಾ ಪ್ರೆಸಿಡೆಂಟ್ ಸಿರಿಲ್ ರಮಫೋಸಾ ಅವ್ರ ಹೆಸ್ರು ಕೇಳಿಬರ್ತಿದೆ. ಗಣರಾಜ್ಯೋತ್ಸವಕ್ಕೆ ಮುಖ್ಯ ಅಥಿತಿಯಾಗಿ ರಮಫೋಸಾ ಬರೋ ಸಾಧ್ಯತೆ ಇದೆ. ಗಾಂಧಿವಾದಿ ಆಗಿರೋ ರಮಫೋಸಾ ಅವರನ್ನು ಆಹ್ವಾನಿಸಲಾಗಿದ್ದು, ಅದಕ್ಕೆ ಅವ್ರು ಒಪ್ಪಿದ್ದಾರೆ ಅಂತ ತಿಳಿದು ಬಂದಿದೆ.
ರಷ್ಯಾದೊಂದಿಗೆ ಭಾರತ S-400 ಕ್ಷಿಪಣಿ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿತ್ತು. ಇದು ಅಮೆರಿಕಾಕ್ಕೆ ಇಷ್ಟ ಇರ್ಲಿಲ್ಲ. ಅಷ್ಟೇ ಅಲ್ದೆ ಇರಾನ್ ನಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ತಾ ಇರೋದಕ್ಕೂ ಅಮೆರಿಕಾದ ವಿರೋಧವಿದೆ. ಇದೇ ಕಾರಣಕ್ಕೆ ಭಾರತದ ಆಹ್ವಾನವನ್ನು ಅಮೆರಿಕಾ ತಿರಸ್ಕರಿಸಿದೆ ಅಂತ ಹೇಳಲಾಗ್ತಿದೆ.