Friday, July 19, 2024

ದೀಪಿಕಾ-ರಣವೀರ್ ಮದ್ವೆ ಫೋಟೋಕ್ಕೆ ಕಾದ್ರೆ ‘ಅಸ್ಥಿಪಂಜರ’ ಆಗ್ತೀರಿ..!

ಬಾಲಿವುಡ್ ನಟಿ ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದ್ವೆ ಆಗಿದೆ. ಇಟಲಿಯ ಲೇಕ್ ಕೋಮಾದ ರೆಸಾರ್ಟ್ ನಲ್ಲಿ ಬಾಲಿವುಡ್ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಇಂದು ಕೂಡ ಉತ್ತರ ಭಾರತೀಯ ಶೈಲಿಯಲ್ಲಿ ಮದ್ವೆ ನಡೆಯುತ್ತೆ. ಆದ್ರೆ, ದೂರದಲ್ಲಿ ಆಗ್ತಿರೋ ಮದ್ವೆಯನ್ನು ನೋಡೋಕೆ ಆಗ್ತಿಲ್ಲ, ಒಂದೊಳ್ಳೆ ಫೋಟೋ ಕೂಡ ಸಿಗ್ತಿಲ್ಲ ಅಂತ ರಣವೀರ್, ದೀಪಿಕಾ ಫ್ಯಾನ್ಸ್ ಬೇಜಾರಾಗಿದ್ದಾರೆ. ಯಾಕಂದ್ರೆ, ಈ ಮದ್ವೆಯಲ್ಲಿ ಫೋಟೋ ತೆಗೆಯೋದನ್ನು ನಿಷೇಧಿಸಲಾಗಿದೆ.
ರಣವೀರ್-ದೀಪಿಕಾ ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡ್ತಾರೆ ಅಂತ ಫ್ಯಾನ್ಸ್ ವ್ಹೇಟ್ ಮಾಡ್ತಿದ್ದಾರೆ. ಆದ್ರೆ, ಈ ದೀಪಿಕಾ-ರಣವೀರ್ ಮದ್ವೆ ಫೋಟೋಗಳಿಗೆ ಕಾಯ್ತಾ ಇರೋರ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಮಾಷೆ ಮಾಡಿ ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟೊಂದನ್ನು ಮಾಡಿದ್ದಾರೆ. ”ದೀಪಿಕಾ-ರಣವೀರ್ ಮದ್ವೆ ಫೋಟೋಕ್ಕೆ ಕಾದ್ರೆ ಹೀಗಾಗುತ್ತೆ” ಅಂತ ಸ್ಮೃತಿ ಇರಾನಿ ಅಸ್ಥಿಪಂಜರದ ಫೋಟೋ ಹಾಕಿ ತಮಾಷೆ ಮಾಡಿದ್ದಾರೆ.

https://www.instagram.com/p/BqKsPELAi_3/?utm_source=ig_embed

RELATED ARTICLES

Related Articles

TRENDING ARTICLES