Saturday, April 20, 2024

ಕೆಆರ್​ಎಸ್​​ನಲ್ಲಿ ‘ಕಾವೇರಿ’ ಪ್ರತಿಮೆ..!

ಗುಜರಾತ್ ನಲ್ಲಿ 182 ಮೀಟರ್ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಲೋಕಾರ್ಪಣೆ ಮಾಡಿದ್ರು. ಅದೇ ರೀತಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಕರ್ನಾಟಕದಲ್ಲಿ 125 ಅಡಿ ಕಾವೇರಿ ಮಾತೆ ಪ್ರತಿಮೆಯನ್ನ ನಿರ್ಮಿಸಲು ಚಿಂತನೆ ನಡೆಸಿದೆ. ಇದಕ್ಕೆ 1200 ಕೋಟಿ ವೆಚ್ಚವಾಗಬಹುದು ಅಂತ ಅಂದಾಜಿಸಲಾಗಿದೆ. ಕೆಆರ್ ಎಸ್ ನಲ್ಲಿ ನಿರ್ಮಿಸಲಾಗುತ್ತದೆಂದು ಹೇಳಲಾಗ್ತಿದೆ. ಆದ್ರೆ, ಎಲ್ಲಿ ನಿರ್ಮಿಸಬೇಕು ಅನ್ನುವ ಬಗ್ಗೆ ಚರ್ಚೆ ಇನ್ನೂ ನಡೀತಾ ಇದೆ.

360 ಅಡಿ ಮ್ಯೂಸಿಯಂ, 125 ಅಡಿ ಕಾವೇರಿ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸ್ಟ್ಯಾಚ್ಯೂ ಆಫ್​​​ ಯೂನಿಟಿ ಮಾದರಿಯಲ್ಲಿ ಕಾವೇರಿ ಮಾತೆ ಪ್ರತಿಮೆ ಇರಲಿದೆ ಅಂತ ಹೇಳಲಾಗ್ತಿದೆ. ಪ್ರವಾಸಿಗರನ್ನು ಸೆಳೆಯಲು ದೋಸ್ತಿ ಸರ್ಕಾರ ಈ ಪ್ಲಾನ್ ಮಾಡಿದೆಯಂತೆ.

RELATED ARTICLES

Related Articles

TRENDING ARTICLES