ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಜಯಸಿದ ಸಾಧನೆ ಮಾಡಿದ್ದ ಭಾರತದ ಹಿಮಾದಾಸ್ ಯುನಿಸೆಫ್ನ ಯುವ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಯುನಿಸೆಫ್ನ ಯೂತ್ ಅಂಬಾಸಿಟರ್ ಆಗಿ ಆಯ್ಕೆಯಾದ ಮೊದಲ ಭಾರತೀಯಳು ಅನ್ನೋ ಹೆಗ್ಗಳಿಕೆಗೂ ಅಸ್ಸಾಂನ ಹಿಮಾ ಪಾತ್ರರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಹಿಮಾದಾಸ್, ”ಯುನಿಸೆಫ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಭಾರತದ ದಿಗ್ಗಜರು ಇದರ ರಾಯಭಾರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರೋದು ಸಂತಸದ ವಿಚಾರ” ಅಂತ ಹೇಳಿದ್ದಾರೆ.
20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಜಯಸಿ, ಐಎಎಎಫ್ ವಲ್ಡ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಜಯಸಿದ ಭಾರತದ ಮೊದಲ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಹಿಮಾ, 2018ರ ಏಷ್ಯನ್ ಗೇಮ್ಸ್ನಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದ್ರು. ಕ್ರೀಡಾಕೂಟದ ಮಹಿಳೆಯರ 4 X 400 ಮೀಟರ್ ರಿಲೇಯಲ್ಲಿ ಚಿನ್ನ ಹಾಗೂ 400 ಮೀಟರ್ ರೇಸ್ನಲ್ಲಿ ಬೆಳ್ಳಿ ಜಯಸಿದ್ದರು.
-ವಸಂತ್ ಮಳವತ್ತಿ. ಸ್ಪೋರ್ಟ್ಸ್ ಬ್ಯೂರೋ. ಪವರ್ ಟಿವಿ