Friday, July 19, 2024

ಚಿನ್ನದ ಹುಡುಗಿ ಈಗ ಯುನಿಸೆಫ್​ನ ರಾಯಭಾರಿ

ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಜಯಸಿದ ಸಾಧನೆ ಮಾಡಿದ್ದ ಭಾರತದ ಹಿಮಾದಾಸ್​ ಯುನಿಸೆಫ್​ನ ಯುವ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಯುನಿಸೆಫ್​ನ ಯೂತ್​ ಅಂಬಾಸಿಟರ್​ ಆಗಿ ಆಯ್ಕೆಯಾದ ಮೊದಲ ಭಾರತೀಯಳು ಅನ್ನೋ ಹೆಗ್ಗಳಿಕೆಗೂ ಅಸ್ಸಾಂನ ಹಿಮಾ ಪಾತ್ರರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಹಿಮಾದಾಸ್​, ”ಯುನಿಸೆಫ್ ಸಚಿನ್​ ತೆಂಡೂಲ್ಕರ್​ ಸೇರಿದಂತೆ ಹಲವು ಭಾರತದ ದಿಗ್ಗಜರು ಇದರ ರಾಯಭಾರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರೋದು ಸಂತಸದ ವಿಚಾರ” ಅಂತ ಹೇಳಿದ್ದಾರೆ.

20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್​ ಚಾಂಪಿಯನ್​ಷಿಪ್​ನಲ್ಲಿ ಚಿನ್ನ ಜಯಸಿ, ಐಎಎಎಫ್ ವಲ್ಡ್​ ಚಾಂಪಿಯನ್​ಷಿಪ್​ನಲ್ಲಿ ಚಿನ್ನ ಜಯಸಿದ ಭಾರತದ ಮೊದಲ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಹಿಮಾ, 2018ರ ಏಷ್ಯನ್​ ಗೇಮ್ಸ್​​ನಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದ್ರು. ಕ್ರೀಡಾಕೂಟದ​ ಮಹಿಳೆಯರ 4 X 400 ಮೀಟರ್​ ರಿಲೇಯಲ್ಲಿ ಚಿನ್ನ ಹಾಗೂ 400 ಮೀಟರ್​ ರೇಸ್​​ನಲ್ಲಿ ಬೆಳ್ಳಿ ಜಯಸಿದ್ದರು.
-ವಸಂತ್​ ಮಳವತ್ತಿ. ಸ್ಪೋರ್ಟ್ಸ್​​​ ಬ್ಯೂರೋ. ಪವರ್​ ಟಿವಿ

RELATED ARTICLES

Related Articles

TRENDING ARTICLES