ರಾಕಿಂಗ್ ಸ್ಟಾರ್ ಯಶ್ ಗೆ ಸೆಡ್ಡು ಹೊಡೆದಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..! ಅಂದ್ರೆ, ಯಶ್ ಮತ್ತು ಸುದೀಪ್ ಇಬ್ರಲ್ಲಿ ಯಾರೂ ಹೆಚ್ಚು ಯಾರು ಕಮ್ಮಿ ಅಂತ ಹೇಳ್ತಿಲ್ಲ. ಬದಲಾಗಿ ನಾವಿಲ್ಲಿ ಹೇಳ್ತಿರೋದು ಯಶ್ ಅಭಿನಯದ ಕೆಜಿಎಫ್ ಮತ್ತು ಸುದೀಪ್ ಅಭಿನಯದ ಫೈಲ್ವಾನ್ ಬಗ್ಗೆ.
ಈಗಾಗಲೇ ಟ್ರೇಲರ್ ನಿಂದ ಸದ್ದು ಮಾಡ್ತಿರೋ ಕೆಜಿಎಫ್ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ರಿಲೀಸ್ ಆಗ್ತಿದೆ. ಕೆಜಿಎಫ್ 5 ಭಾಷೆಗಳಲ್ಲಿ ರಿಲೀಸ್ ಆಗ್ತಿರೋ ಎಫೆಕ್ಟೋ ಏನೋ..? ಸುದೀಪ್ ಅಭಿನಯದ ಫೈಲ್ವಾನ್ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಅಂತ ಹೇಳಲಾಗ್ತಿದೆ.
ಕೆಜಿಎಫ್ ಪಂಚ ಭಾಷೆಗಳಲ್ಲಿ ರಿಲೀಸ್ ಆಗ್ತಿರೋ ನ್ಯೂಸ್ ಬಂದಿದ್ದೇ ತಡ, ಪ್ರೊಡ್ಯೂಸರ್ ಗಳು ತಮ್ಮ ಸಿನಿಮಾಗಳನ್ನೂ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡಲು ಡಿಸೈಡ್ ಮಾಡಿದ್ದಾರೆ. ಇದಕ್ಕೆ ಮೊದಲ ಸೇರ್ಪಡೆ ಕಿಚ್ಚ ನಟನೆ ಫೈಲ್ವಾನ್ ಅಂತ ಹೇಳ್ಬಹುದು.
ಫೈಲ್ವಾನ್ ಹೊಸ ರೆಕಾರ್ಡ್ ಮಾಡೋಕೆ ರೆಡಿಯಾಗಿದೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈಗಾಗಲೇ ಡಬ್ಬಿಂಗ್ ಹಕ್ಕಿಗಾಗಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಬರ್ತಿದೆಯಂತೆ.
ಯಶ್ ಗೆ ಸೆಡ್ಡು ಹೊಡೆದ ಸುದೀಪ್..!
TRENDING ARTICLES