Friday, March 29, 2024

ಪಾಕ್ ಗೆ ಕಾಶ್ಮೀರ ಅವಶ್ಯಕತೆ ಇಲ್ಲ ಅಂದ ಅಫ್ರಿದಿ..!

“ಪಾಕಿಸ್ತಾನಕ್ಕೆ ಕಾಶ್ಮೀರದ ಅವಶ್ಯಕತೆ ಇಲ್ಲ, ಇರುವ ನಾಲ್ಕು ಪ್ರಾಂತ್ಯಗಳನ್ನೇ ನಿರ್ವಹಿಸುವ ಶಕ್ತಿ ಅದಕ್ಕಿಲ್ಲ, ದೇಶವನ್ನು ಆತಂಕವಾದಿಗಳಿಂದ ರಕ್ಷಿಸಲು, ರಾಷ್ಟ್ರದಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಸರ್ಕಾರ” ವಿಫಲವಾಗಿದೆ..!
ಹೀಗೆಂದವರುಬ ಬೇರೆ ಯಾರೂ ಅಲ್ಲ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ. ಪಾಕಿಸ್ತಾನಕ್ಕೆ ತನ್ನ 4 ಪ್ರಾಂತ್ಯಗಳನ್ನೇ ನೋಡಿಕೊಳ್ಳಲು ಆಗುತ್ತಿಲ್ಲ. ಇನ್ನು ಪಾಕಿಸ್ತಾನ ಕಾಶ್ಮೀರಕ್ಕಾಗಿ ಬೇಡಿಕೆ ಇಡೋದು ಸರಿಯಲ್ಲ. ಪಾಕಿಸ್ತಾನದಲ್ಲಿ ಒಗ್ಗಟ್ಟು ಇಲ್ಲ. ಪ್ರತ್ಯೇಕವಾದಿಗಳ ಕೈಯಿಂದ ದೇಶವನ್ನು ಮುಕ್ತಗೊಳಿಸಲು ಸಾಧ್ಯವಾಗಿಲ್ಲ ಎಂದು ಅಫ್ರಿದಿ ಹೇಳಿದ್ದಾರೆ. ಲಂಡನ್​ನ ಬ್ರಿಟಿಷ್‌ ಸಂಸತ್ತಿನಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ಅಫ್ರಿದಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಕಾಶ್ಮೀರದ ಆವಶ್ಯಕತೆ ಬೇಕಾಗಿಲ್ಲ. ಹಾಗಂತ ಭಾರತಕ್ಕೂ ಕಾಶ್ಮೀರವನ್ನು ನೀಡಬೇಕಾಗಿಲ್ಲ. ಕಾಶ್ಮೀರ ಒಂದು ದೇಶವಾಗಿ ಬೆಳೆಯಲಿ. ಅಲ್ಲಿ ಜನರು ಸಾಯುತ್ತಿದ್ದಾರೆ. ಅವರನ್ನು ಸಾಯಲು ಬಿಡಬಾರದು. ಅವರು ಬದುಕಬೇಕು. ಮಾನವೀಯತೆ ಉಳಿಯಲಿ. ಜನರು ಸಾಯುತ್ತಿರುವುದನ್ನು ನೋಡುವಾಗ ಮನಸ್ಸಿಗೆ ನೋವಾಗುತ್ತದೆ ಅನ್ನೋದು ಅಫ್ರಿದಿ ಮಾತು.
ಬಳಿಕ ಟ್ವೀಟ್​ ಮೂಲಕ ಮತ್ತೆ ಪ್ರತಿಕ್ರಿಯಿಸಿದ ಅಫ್ರಿದಿ ‘ಭಾರತೀಯ ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ನನ್ನ ದೇಶಕ್ಕೆ ಋಣಿಯಾಗಿದ್ದೇನೆ ಮತ್ತು ನಾನು ಕಾಶ್ಮೀರ ಹೋರಟಕ್ಕೆ ಗೌರವಿಸುತ್ತೇನೆ’ ಅಂದಿದ್ದಾರೆ.
ಬಳಿಕ ಮತ್ತೊಂದು ಟ್ವೀಟ್​ ಮಾಡಿದ ಅಫ್ರಿದಿ ನಾನು ಹೇಳಿದ ಮಾತುಗಳು ‘ಆ ವಿಡಿಯೋದಲ್ಲಿ ಇಲ್ಲ. ಇದನ್ನು ವಿಶ್ವಸಂಸ್ಥೆಯ ನಿಯಮಗಳಡಿಯಲ್ಲಿ ಇದನ್ನು ಸರಿಪಡಿಸಿಕೊಳ್ಳ ಬೇಕಿದೆ. ನಾನು ಸೇರಿದಂತೆ ಎಲ್ಲಾ ಪಾಕಿಸ್ತಾನಿಯರು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು’ ಅಂತ ಹೇಳಿದ್ದಾರೆ. ಸದ್ಯ ಪಾಕಿಸ್ತಾನ ಬಲೂಚಿಸ್ತಾನ, ಪಂಜಾಬ್‌, ಸಿಂಧ್‌ ಹಾಗೂ ಖೈಬರ್ ಅನ್ನೋ 4 ಪ್ರಾಂತ್ಯಗಳನ್ನ ಹೊಂದಿದೆ.

RELATED ARTICLES

Related Articles

TRENDING ARTICLES