Friday, July 19, 2024

ಚಿಲ್ಡ್ರನ್ಸ್ ಡೇ ಸ್ಪೆಷಲ್ – ಅಭಿಮಾನಿಗಳಿಗೆ ‘ಆರ್ ಸಿಬಿ’ ಚಾಲೆಂಜ್..!

ಇಂದು ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದ್ರಿಂದ ಟೀಮ್​​ಇಂಡಿಯಾದ ಸ್ಟಾರ್​​ ಆಟಗಾರರು ಕೂಡ ಹೊರತಾಗಲಿಲ್ಲ. ಭಾರತದ ಸ್ಟಾರ್​ ಪ್ಲೇಯರ್ಸ್​​ ಕೂಡ ಚಿಲ್ಡ್ರನ್ಸ್ ಡೇಗೆ ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.
ಆದ್ರೆ, ಐಪಿಎಲ್​ ​​ನ ಹಾಟ್​ ಫೇವರೇಟ್​ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಶುಭಾಶಯ ತಿಳಿಸಲು ವಿಭಿನ್ನ ದಾರಿ ಹಿಡಿದಿದೆ. ತನ್ನ ಅಧಿಕೃತ ಟ್ವೀಟ್ಟರ್​ ಅಕೌಂಟ್ ನಲ್ಲಿ 5 ಚಿತ್ರಗಳನ್ನ ಪ್ರಕಟಿಸಿ, ಆ ಚಿತ್ರದಲ್ಲಿರುವ ವ್ಯಕ್ತಿಗಳನ್ನ ಗುರುತಿಸಿ ಅಂತ ಅಭಿಮಾನಿಗಳಿಗೆ ಚಾಲೆಂಜ್​ ಹಾಕಿದೆ.

ಇದೇ ದಾರಿ ಹಿಡಿದಿರೋ ಕೋಲ್ಕತ್ತಾ ನೈಟ್​​ ರೈಡರ್ಸ್​​ ಕೂಡ ಅಭಿಮಾನಿಗಳಿಗೆ ತನ್ನ ಟ್ವಿಟರ್ ಖಾತೆಯಲ್ಲಿ ಸವಾಲು ಹಾಕಿದೆ. 

ಚೆನೈ ಸೂಪರ್​ ಕಿಂಗ್ಸ್ ಕ್ಯಾಪ್ಟನ್ ಎಮ್​.ಎಸ್​ ಧೋನಿ ಮಗಳು ಝೀವಾ ಹಾಗೂ ಹರ್ಭಜನ್​ ಸಿಂಗ್​ ಪುತ್ರಿಯ ವಿಡಿಯೋ ತುಣುಕನ್ನ ತನ್ನ ಖಾತೆಯಲ್ಲಿ ಪ್ರಕಟಿಸಿ ಶುಭ ಕೋರಿದೆ. 

ಇನ್ನು ಶಿಖರ್​ ಧವನ್​ ತಮ್ಮ ಮಗನೊಂದಿಗಿನ ವೀಡಿಯೋವನ್ನ ಪ್ರಕಟಿಸಿ ಶುಭ ಕೋರಿದ್ರೆ, ಹರ್ಭಜನ್​ ಸಿಂಗ್, ಚೆತೇಶ್ವರ್ ಪೂಜಾರ, ವಿರಾಟ್​​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಕೆಎಲ್​ ರಾಹುಲ್ ಹಾಗೂ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್ ಕೂಡ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

https://www.instagram.com/p/BqJZXbcBxS9/

-ವಸಂತ್​ ಮಳವತ್ತಿ, ಸ್ಪೋರ್ಟ್ಸ್​​ ಬ್ಯೂರೋ ಪವರ್​ಟಿವಿ

 

RELATED ARTICLES

Related Articles

TRENDING ARTICLES