ಮಹಾಭಾರತ ಬರೆದಿದ್ದು ವಾಲ್ಮೀಕಿಯಂತೆ..! ಹೀಗಂತ ಶಾಸಕರೊಬ್ಬರು ಹೇಳಿದ್ದು, ಈ ವೀಡಿಯೋ ಇದೀಗ ವೈರಲ್ ಆಗಿದೆ. ದಾವಣಗೆರೆಯ ಹರಿಹರ ಕ್ಷೇತ್ರದ ಎಂಎಲ್ ಗೆ ಎಸ್. ರಾಮಪ್ಪ ಈ ಎಡವಟ್ಟು ಮಾಡಿಕೊಂಡವ್ರು.
ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ಮಹಾಭಾರತ ಬರೆದಿದ್ದು ವಾಲ್ಮೀಕಿ ಅಂದಿದ್ದಾರೆ..! ವಾಲ್ಮೀಕಿ ಜಯಂತಿ ಉದ್ಘಾಟಿಸಿದ ರಾಮಪ್ಪ, ”ಕಳ್ಳತನ, ದರೋಡೆ ಮಾಡ್ತಿದ್ದ ವಾಲ್ಮೀಕಿ ಮಹರ್ಷಿ ಪರಿವರ್ತನೆ ಹೊಂದಿ ಮಾಡಿರೋ ಸಾಧನೆ ಅದ್ಭುತ. ಅವರು ಭಾರತ ಮತ್ತು ವಿಶ್ವದ ಜನರಿಗೆ ಮಾರ್ಗದರ್ಶನ ನೀಡುವಂಥಾ ಮಹಾಭಾರತ ಬರೆದ್ರು. ಇದು ಒಂದೇ ಸಮಾಜದವ್ರಿಗೆ ಸೀಮಿತವಾಗಿಲ್ಲ. ಎಲ್ಲರಿಗೂ ದಾರಿ ದೀಪವಾಗುತ್ತದೆ” ಅಂತ ಹೇಳಿದ್ರು.