ಪ್ರೀತಿಸಿ ಮದುವೆಯಾದ ಒಂದೇ ಜಾತಿಯ ಜೋಡಿಗೆ ಹುಡುಗಿ ಮನೆಯವರು ವಿಲನ್ ಆಗಿರೋ ಘಟನೆ ದಾವಣಗೆರೆ ತಾಲೂಕಿನ ದೊಡ್ಡಮಾಗಡಿ ಗ್ರಾಮದಲ್ಲಿ ನಡೆಇದೆ. ದೊಡ್ಡಮಾಗಡಿ ಗ್ರಾಮದವರೇ ಆಗಿರುವ ಸಂಗೀತಾ ಹಾಗೂ ಕಾರ್ತಿಕ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ಅಕ್ಟೋಬರ್ 25ರಂದು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಇದಕ್ಕೆ ಯುವತಿಯ ಮನೆಯವರ ಭಾರೀ ವಿರೋಧವಿತ್ತು.
ಮೊನ್ನೆ ಕಾರ್ತಿಕ್ ಚಿಕ್ಕಮ್ಮನಾಗರತ್ನ ಬಾಯಿ ಹಾಗೂ ಸಂಬಂಧಿ ಚೇತನ್ ಕುಮಾರ್ ಅನ್ನೋರು ಯುವತಿಯ ಮನೆಗೆ ಆಕೆಯ ಬಟ್ಟೆಗಳನ್ನ ತರಲು ಹೋದಾಗ ಯುವತಿಯ ಪೋಷಕರು ಹಾಗೂ ಅಣ್ಣಂದಿರು ಚೇತನ್ ಕುಮಾರ್ ಸ್ಕೂಟರ್ ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಜೊತೆಗೆ ಇಬ್ಬರನ್ನೂ ಸುಟ್ಟುಹಾಕೋದಾಗಿ ಮನೆಯ ಒಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದ್ದಾರೆ. ಚೇತನ್ ಹಾಗೂ ನಾಗರತ್ನ ಅಲ್ಲಿಂದ ತಪ್ಪಿಸಿಕೊಂಡು ಬಚಾವಾಗಿದ್ದಾರೆ. ಪ್ರೀತಿಸಿ ಮದುವೆಯಾದ ಜೋಡಿಗೂ ಯುವತಿ ಮನೆಯವರ ಕಡೆಯಿಂದ ಬೆದರಿಕೆ ಇದ್ದು, ಈ ಸಂಬಂಧ ಮಾಯಕೊಂಡ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಲೀಸರು ಯುವತಿಯ ತಂದೆ ಧರ್ಮನಾಯ್ಕ, ತಾಯಿ ಯಶೋಧಾ ಬಾಯಿ, ಸಹೋದರರಾದ ಸಂತೋಷ್ ಹಾಗೂ ಸಂಪತ್ ರನ್ನ ಬಂದಿಸಿದ್ದಾರೆ.