ಮೀ ಟೂ ಮೂಮೆಂಟ್ ನಲ್ಲಿ ಡೈರೆಕ್ಟರ್ ರವಿ ಶ್ರೀವತ್ಸಾ ಅವ್ರ ಮೇಲೆ ಆರೋಪ ಮಾಡಿದ್ದ ನಟಿ ಸಂಜನಾ ಗಲ್ರಾನಿ ಕೊನೆಗೂ ಕ್ಷಮೆ ಕೇಳಿದ್ದಾರೆ.
ಗಂಡ-ಹೆಂಡತಿ ಸಿನಿಮಾ ಶೂಟಿಂಗ್ ಟೈಮ್ ನಲ್ಲಿ ನನ್ನ ಜೊತೆ ನಿರ್ದೇಶಕ ರವಿ ಶ್ರೀವತ್ಸಾ ಅಸಭ್ಯವಾಗಿ ನಡೆದುಕೊಂಡಿದ್ರು. ಒತ್ತಾಯ ಮಾಡಿ ಕಿಸ್ಸಿಂಗ್ ಸೀನ್ ಮಾಡಿಸಿದ್ರು. ಅವೆಲ್ಲಾ ಆಗ ನಂಗೆ ಗೊತ್ತಾಗ್ತಿರ್ಲಿಲ್ಲ. ಆಗಿನ್ನೂ ನಂಗೆ 16 ವರ್ಷವಷ್ಟೇ ಅಂತ ಸಂಜನಾ ಆರೋಪಿಸಿದ್ರು. ಇದಕ್ಕೆ ಸಂಬಂಧಪಟ್ಟಂತೆ ಇಂದು ಅವ್ರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ನಿರ್ದೇಶಕರ ಸಂಘದಲ್ಲಿ ಡೈರೆಕ್ಟರ್ ರವಿ ಶ್ರೀವತ್ಸಾ ಅವ್ರರಲ್ಲಿ ಬಹಿರಂಗ ಕ್ಷಮೆ ಕೇಳ್ಬೇಕು ಅಂತ ಚಲನಚಿತ್ರ ನಿರ್ದೇಶಕರ ಸಂಘ ಸಂಜನಾಗೆ ಸೂಚಿಸಿತ್ತು. ಅಂತೆಯೇ ಸಂಜನಾ ಇಂದು ಕಲಾವಿದರ ಸಂಘದ ಅಧ್ಯಕ್ಷ ರೆಬಲ್ ಸ್ಟಾರ್ ಸಮ್ಮುಖದಲ್ಲಿ ಕ್ಷಮೆ ಕೇಳಿದ್ರು.
ನಾನು ಯಾರ ಮನಸ್ಸನ್ನೂ ನೋಯಿಸೋ ಉದ್ದೇಶದಿಂದ ಆರೋಪ ಮಾಡಿರ್ಲಿಲ್ಲ. ನನ್ನ ಅಭಿಪ್ರಾಯ ತಿಳಿಸಿದ್ದೆ. ಕಲಾವಿದರ ಸಂಘದ ಹಿರಿಯರ ಮಾತಿಗೆ ಬೆಲೆಕೊಟ್ಟು ಕ್ಷಮೆ ಕೇಳ್ತಿದ್ದೇನೆ ಅಂತ ಸಂಜನಾ ಕ್ಷಮೆ ಕೋರಿದ್ದಾರೆ.
ಬಹಿರಂಗ ಕ್ಷಮೆ ಕೇಳಿದ ಸಂಜನಾ ಗಲ್ರಾನಿ..!
TRENDING ARTICLES