Saturday, September 14, 2024

ರೋ’ಹಿಟ್’ ವರ್ಲ್ಡ್ ರೆಕಾರ್ಡ್ ಗೆ 4 ವರ್ಷ..!

ಇಂದಿನ ಆ ದಿನ ಹಿಟ್​ಮ್ಯಾನ್​ ನಿರ್ಮಿಸಿದ್ರು ವಿಶ್ವದಾಖಲೆ..! ಮರೆಯಲಾಗದ ಇನ್ನಿಂಗ್ಸ್​ಗೆ ತುಂಬಿತು 4 ವಸಂತ..!

ಯಸ್​.. ನವೆಂಬರ್​ 13, 2014. ಅಂದು ಹಿಟ್​​ಮ್ಯಾನ್​ ಅಬ್ಬರಕ್ಕೆ ಶ್ರೀಲಂಕಾ ಬೆಚ್ಚಿ ಬಿದ್ದಿತ್ತು. ಭಾರತದ ಕ್ರಿಕೆಟ್​ ಕಾಶಿ ಅಂತ ಕರೆಸಿಕೊಳ್ಳೋ ಕೋಲ್ಕತ್ತಾದ ಈಡನ್​ ಗಾರ್ಡನ್​ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ಹಿಟ್ ಮ್ಯಾನ್ ರೋಹಿತ್​ ಶರ್ಮಾ ನೀಡಿದ್ರು. ಆ ಮ್ಯಾಚ್ ನ ಆರಂಭದಲ್ಲಿ ಶ್ರೀಲಂಕಾ ಪ್ಲೇಯರ್ ತಿಸರ ಪೇರೆರಾ ಮಾಡಿದ ಒಂದೇ ಒಂದು ತಪ್ಪು ವರ್ಲ್ಡ್ ರೆಕಾರ್ಡ್ ನಿರ್ಮಿಸೋ ಅವಕಾಶವನ್ನ ರೋಹಿತ್​ ಶರ್ಮಾಗೆ ನೀಡ್ತು.
ಶ್ರೀಲಂಕಾದ ಭಾರತ ಪ್ರವಾಸದ ನಾಲ್ಕನೇ ಒಡಿಐ ಮ್ಯಾಚದು. 2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಇಂಜುರಿಗೆ ತುತ್ತಾಗಿ ಟೀಮ್ ನಿಂದ ಹೊರಬಿದ್ದಿದ್ದ ರೋಹಿತ್​ ಆ ಮ್ಯಾಚ್ ಮೂಲಕ ಕಮ್​ಬ್ಯಾಕ್​ ಮಾಡಿದ್ರು. ಕೋಲ್ಕತ್ತಾ ಈಡನ್​ ಗಾರ್ಡನ್​ನಲ್ಲಿ ನಡೆದಿದ್ದ ಮ್ಯಾಚ್ ನಲ್ಲಿ ರೋಹಿತ್​ ವಿಶ್ವದಾಖಲೆಯ ಡಬಲ್​ ಸೆಂಚುರಿ ಸಿಡಿಸಿ ಅಬ್ಬರಿಸಿದ್ರು. ಭರ್ಜರಿ ಬೌಂಡರಿ, ಸಿಕ್ಸರ್​ ಗಳೊಂದಿಗೆ ಲಂಕಾ ಪ್ಲೇಯರ್ಸ್ ಗಳನ್ನು ಇನ್ನಿಲ್ಲದಂತೆ ಕಾಡಿದ್ದ ಹಿಟ್​ಮ್ಯಾನ್​ 264ರನ್​ ಚಚ್ಚಿದ್ರು. ಆ 264 ರನ್​ ಸಿಡಿಸಲು ರೋಹಿತ್​ ಎದುರಿಸಿದ್ದು ಕೇವಲ 173 ಬಾಲ್ ಗಳನ್ನು ಮಾತ್ರ.
ರೋಹಿತ್​ ವರ್ಲ್ಡ್ ರೆಕಾರ್ಡ್ ಇನ್ನಿಂಗ್ಸ್​
ಬಾಲ್ ಗಳು           173
ರನ್​                  264
4/6                 33/9
ಸ್ಟೈಕ್​ ರೇಟ್​        152.60
ಕೇವಲ 4 ರನ್​ಗಳಿಸಿದ್ದಾಗ ಕ್ಯಾಚ್​ ಕೈ ಚೆಲ್ಲಿದ ತಿಸರಾ ಪೇರೆರಾ ರೊಹೀತ್​ ವಿಶ್ವದಾಖಲೆಗೆ ಅವಕಾಶ ಮಾಡಿ ಕೊಟ್ರು. ಇದು ರೋಹಿತ್​ ಶರ್ಮಾ ಬ್ಯಾಟ್​ನಿಂದ 2ನೇ ದ್ವಿಶತಕ ಬರಲು ಕಾರಣವಾಯ್ತು. ಒಡಿಐ ಮಾದರಿಯಲ್ಲಿ ಇದುವರೆಗೆ ಒಟ್ಟು 3 ಡಬಲ್ ಸೆಂಚುರಿಗಳನ್ನು ರೋಹಿತ್​ ಸಿಡಿಸಿದ್ದಾರೆ.
ಒಡಿಐನ ರೋಹಿತ್​ ಡಬಲ್​ ಸೆಂಚುರೀಸ್​
ಎದುರಾಳಿ     ವರ್ಷ     ರನ್​      ಎಸೆತ       4/6
ಆಸ್ಟ್ರೇಲಿಯಾ  2013   209     158    12/16
ಶ್ರೀಲಂಕಾ     2014   264     173     33/9
ಶ್ರೀಲಂಕಾ    2017    208*   153     13/12

ಒಡಿಐ ಕ್ರಿಕೆಟ್​ನಲ್ಲಿ ಒಟ್ಟು 6 ಬ್ಯಾಟ್ಸ್​​ಮನ್​ಗಳು ಡಬಲ್​ ಸೆಂಚುರಿ ಮಾಡಿದ್ದಾರೆ. ಆದ್ರೆ ಇದರಲ್ಲಿ ಮೂವರು ಭಾರತೀಯರೆ ಅನ್ನೊದು ವಿಶೇಷ. ಮೊದಲ ದ್ವಿಶತಕ ಸಿಡಿಸಿದ ಕೀರ್ತಿ ಕ್ರಿಕೆಟ್​​ ದೇವರು ಸಚಿನ್​ ತೆಂಡೂಲ್ಕರ್​ಗೆ ಸಲ್ಲುತ್ತೆ. 2010ರಲ್ಲಿ ಸೌತ್​ ಆಫ್ರಿಕಾ ವಿರುದ್ಧ ಮಾಸ್ಟರ್​ ಬ್ಲಾಸ್ಟರ್​ ಡಬಲ್​ ಸೆಂಚುರಿ ಬಾರಿಸಿದ್ರು. 2011ರಲ್ಲಿ ವಿರೇಂದ್ರ ಸೆಹ್ವಾಗ್​ ವೆಸ್ಟ್​ಇಂಡೀಸ್​ ವಿರುದ್ಧ ಈ ಸಾಧನೆಯನ್ನ ಮಾಡಿದ್ರು. ಭಾರತೀಯರನ್ನ ಹೊರತು ಪಡಿಸಿದ್ರೆ ನ್ಯೂಜಿಲೆಂಡ್​ನ ಮಾರ್ಟಿನ್​ ಗಪ್ಟಿಲ್, ವೆಸ್ಟ್​ಇಂಡೀಸ್​ನ ಕ್ರಿಸ್​ಗೇಲ್, ಪಾಕಿಸ್ತಾನದ ಫಕರ್​ ಜಮಾನ್​ ಈ ಸಾಧನೆ ಮಾಡಿದ ಉಳಿದ ಬ್ಯಾಟ್ಸ್​ಮನ್​ಗಳು.

-ವಸಂತ್​ ಮಳವತ್ತಿ. ಸ್ಪೋರ್ಟ್ಸ್​​ ಬ್ಯೂರೋ. ಪವರ್ ಟಿವಿ

RELATED ARTICLES

Related Articles

TRENDING ARTICLES