Tuesday, June 18, 2024

ದೀಪಿಕಾ-ರಣವೀರ್ ಮದ್ವೇಲಿ ಮೊಬೈಲ್ ತಂದವ್ರಿಗೆ ನೋ ಎಂಟ್ರಿ..!

ಬಾಲಿವುಡ್ ನಟಿ ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದ್ವೆ ತಯಾರಿ ಜೋರಾಗಿ ನಡೀತಾ ಇದೆ. ನಾಳೆ ಇಟಲಿಯ ಲೆಕ್ ಕೋಮೋದಲ್ಲಿನ ವಿಲ್ಲಾ ಡೆಲ್ ಬಾಲ್ಬಿಯಾನೆಲೊದಲ್ಲಿ ಸಿಂಧಿ ಸಂಪ್ರದಾಯ ಮತ್ತು ದಕ್ಷಿಣ ಭಾರತದ ಸಂಪ್ರದಾಯದಂತೆ ಮದ್ವೆ ನಡೆಯಲಿದೆ. ಕಾರ್ಯಕ್ರಮಕ್ಕೆ ಇಟಲಿಯ ಕಾಸ್ಟ ದಿವಾ ಸಭಾಂಗಣ ರೆಡಿಯಾಗಿದೆ.

ಇನ್ನು ಈ ಮದ್ವೆಗೆ ಕೆಲವೇ ಕೆಲವು ಮಂದಿ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಸಂಜಯ್ ಲೀಲಾ ಬನ್ಸಾಲಿ, ಫರಾಖಾನ್ ಪಾಲ್ಗೊಳ್ತಿದ್ದಾರೆ. ಮದುವೆಗಾಗಿ ಇಡೀ ರೆಸಾರ್ಟ್ ಬುಕ್ ಮಾಡಿದ್ದಾರೆ ದಿಪೀಕಾ ಮತ್ತು ರಣವೀರ್ ಸಿಂಗ್. ಈ ರೆಸಾರ್ಟ್ ನಲ್ಲಿ 75 ಕೊಠಡಿಗಳು, ನಾಲ್ಕು ರೆಸ್ಟೋರೆಂಟ್ ಗಳು, ನಾಲ್ಕು ಕಾನ್ಫರೆನ್ಸ್ ರೂಂಗಳಿವೆ. ರೆಸ್ಟೋರೆಂಟ್ ಮೇಲೆ ಸುಂದರವಾದ ಟೆರೆಸ್ ಇದ್ದು ಲೇಕ್ ವ್ಯೂ ನೋಡೋ ವ್ಯವಸ್ಥೆ ಇದೆ. ಈ ವಿಲ್ಲಾ ಒಟ್ಟು 26,000 ಸ್ಕ್ವಾಯರ್ ಮೀಟರ್ ವಿಸ್ತೀರ್ಣ ಹೊಂದಿದೆಯಂತೆ.

ಫೋಟೋ ತೆಗೆಯಂಗಿಲ್ಲ..! ಆಹ್ವಾನಿತರಿಗೆ ಫೋಟೋ, ವೀಡಿಯೋ ತೆಗೆಯದಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಯಾವ್ದೇ ಕಾರಣಕ್ಕೂ ಮೊಬೈಲ್ ಬಳಸದಂತೆ ಸೂಚನೆ ನೀಡಲಾಗಿದ್ದು, ರೆಸಾರ್ಟ್​ನಿಂದ 1 ಕಿ.ಮೀ. ದೂರದಲ್ಲಿಯೇ ತೀವ್ರ ತಪಾಸಣೆ ಮಾಡಿ ಒಳ ಬಿಡಲಾಗ್ತಿದೆ. ಕಾರ್ಡ್ ಇಲ್ದೇ ಇರೋರಿಗೆ ಕಡ್ಡಾಯವಾಗಿ ನೋ ಎಂಟ್ರಿ..!
ಮೆನು ಹೀಗಿದೆ..!  ಇನ್ನು ದೀಪಿಕಾ ಪಡುಕೋಣೆ ಮೆಹೆಂದಿ ಶಾಸ್ತ್ರಕ್ಕೆ ಮೆನು ರೆಡಿಯಾಗಿದೆ. ಮಂಗಳೂರು ಮೂಲದ ದಂಪತಿಗೆ ಭೋಜನದ ಉಸ್ತುವಾರಿವಹಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿರೋ ಖ್ಯಾತ ಬಾಣಸಿಗರು ಜವಾಬ್ದಾರಿ ಹೊತ್ತಿದ್ದಾರೆ. ಬಂಧುಗಳಿಗಾಗಿ ಕೊಂಕಣಿ ಖಾದ್ಯ ರೆಡಿ ಮಾಡಲಿರುವ ಮಂಗಳೂರು ಮೂಲದ ದಂಪತಿ. ಸುಮಾರು 30 ಬಗೆಯ ತಿನಿಸುಗಳನ್ನು ಸಿದ್ಧಪಡಿಸಲಿದ್ದಾರೆ. ಕೊಂಕಣಿ ಶೈಲಿಯ ಖಾದ್ಯಗಳಿರುತ್ತವೆ. ದಾಲ್ ತೊವ್ವೆ, ಹಲಸಂಡೆ, ತೊಂಡೆಕಾಯಿ ಗೋಡಂಬಿ ಪಲ್ಯ,ಅನಾನಸ್ ಮೆಣಸು ಸ್ವೀಟ್​, ಅಲಸಂಡೆ ಉಪ್ಪುಕರಿ, ಕಡ್ಲೇ ಬೇಳೆ ಪಾಯಸ, ಜೀವ್ ಗುಜ್ಜೆ ಪಕೋಡ, ತಿಂಗಳವರೆ ಬೆಂಡಿ ಮೆನು ವಿಶೇಷತೆಗಳಾಗಿವೆ,

RELATED ARTICLES

Related Articles

TRENDING ARTICLES