Thursday, April 25, 2024

ಮೈದಾನದಿಂದ ಮಗುವನ್ನು ಹೊತ್ತೊಯ್ದ ಟೀಮ್ ಇಂಡಿಯಾ ಕ್ಯಾಪ್ಟನ್..!

ಪ್ರಸಕ್ತ ಸಾಲಿನ ಐಸಿಸಿ ಮಹಿಳಾ ಟಿ-20 ವಿಶ್ವಕಪ್​ ಆರಂಭದಿಂದಲೂ ಅಭಿಮಾನಿಗಳ ಪಾಲಿಗೆ ಟೀಮ್​ ಇಂಡಿಯಾ ಕ್ಯಾಪ್ಟನ್ ಹರ್ಮನ್​ಪ್ರೀತ್ ಕೌರ್​ ಹಾಟ್​ ಫೇವರೇಟ್ ಪ್ಲೇಯರ್​ ಆಗಿ ಸದಾ ಸುದ್ದಿಯಲ್ಲಿದ್ದಾರೆ. ಟೂರ್ನಿಯಲ್ಲಿ ಆಡಿದ ಎರಡೂ ಮ್ಯಾಚ್ ಗಳಲ್ಲೂ ಜಯ ಸಾಧಿಸಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಟೀಮ್ ಇಂಡಿಯಾ ರೂಪುಗೊಂಡಿರೋದ್ರ ಹಿಂದೆ ಕೌರ್​ ಶ್ರಮ ಹೆಚ್ಚಿದೆ. ಇದೆಲ್ಲದರ ನಡುವೆಯೇ ಭಾರತ-ಪಾಕ್​ ನಡುವೆ ನಡೆದ ಮ್ಯಾಚ್ ನಲ್ಲಿ ತಾಯಿ ಪ್ರೀತಿ ತೋರಿ ನಾಯಕಿ ಮಾನವೀಯತೆ ಮೆರೆದಿದ್ದಾರೆ.
ಭಾನುವಾರ ಗಯಾನ ಪ್ರಾವಿಡೆನ್ಸ್​ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನ ವಿರುದ್ಧದ ಮ್ಯಾಚ್ ಮುನ್ನ ಮಗುವೊಂದನ್ನ ಮೈದಾನದಿಂದ ಹೊರಗೆ ಎತ್ತಿಕೊಂಡು ಬಂದು ಕೌರ್​​ ಎಲ್ಲರ ಮನ ಗೆದ್ದಿದ್ದಾರೆ. ಮ್ಯಾಚ್​ ಆರಂಭಕ್ಕೂ ಮುನ್ನ ಇತ್ತಂಡಗಳೂ ರಾಷ್ಟ್ರಗೀತೆ ಹಾಡುತ್ತಿರುವ ಸಂದರ್ಭದಲ್ಲಿ ಜೊತೆಗಿದ್ದ ಮಸ್ಕತ್ ನ ಬಳಲಿತ್ತು. ಮಗು ಅಸ್ವಸ್ಥವಾಗಿರೋದನ್ನು ಗಮನಿಸಿದ ಕೌರ್​ ರಾಷ್ಟ್ರಗೀತೆ ಮುಗಿಯುವವರೆಗೂ ಕಾದರು. ಬಳಿಕ ಮೈದಾನದಿಂದ ಹೊರಕ್ಕೆ ಮಗುವನ್ನ ಕೈಯಾರೆ ಎತ್ತಿಕೊಂಡು ಬಂದು ಚಿಕಿತ್ಸೆ ನೀಡುವಂತೆ ಸೂಚಿಸಿದ್ರು. ​
ಟೂರ್ನಿಯ ಮೊದಲ ಪಂದ್ಯದಲ್ಲೇ ಕೌರ್​ ಬ್ಯಾಟ್​ನಿಂದ ಹೊರಹೊಮ್ಮಿದ್ದ ದಾಖಲೆಯ ಸೆಂಚುರಿ ಕಂಡು ದಂಗಾಗಿದ್ದ ಅಭಿಮಾನಿಗಳು ಇದೀಗ ಟೀಮ್​ಇಂಡಿಯಾ ನಾಯಕಿಯ ಮಾತೃ ಹೃದಯಕ್ಕೆ ಮನಸೋತಿದ್ದಾರೆ. ಇನ್ನು ಕೌರ್​ ಮಗುವಿಗೆ ಸಹಾಯ ಮಾಡುತ್ತಿರೋ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್​ ಆಗ್ತಿದೆ.

https://twitter.com/NaaginDance/status/1061651193766662144

ಟೂರ್ನಿಯ ಆರಂಭಿಕ ಮ್ಯಾಚ್ ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಜಯ ಸಾದಿಸಿದ್ದ ಭಾರತೀಯ ವನಿತೆಯರು, 2ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್​​ಗಳ ಗೆಲುವಿನ ನಗೆ ಬೀರಿದೆ. ಆಡಿದ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಹರ್ಮನ್​ಪ್ರೀತ್​ ಕೌರ್​ ಬಳಗ ನವೆಂಬರ್​​​ 15ರಂದು ನಡೆಯಲಿರೋ ಮ್ಯಾಚ್ ನಲ್ಲಿ ಐರ್ಲೆಂಡ್​ ತಂಡವನ್ನ ಎದುರಿಸಲಿದೆ.
-ವಸಂತ್​ ಮಳವತ್ತಿ. ಸ್ಪೋರ್ಟ್ಸ್​​ ಬ್ಯೂರೋ, ಪವರ್​​ ಟಿವಿ

RELATED ARTICLES

Related Articles

TRENDING ARTICLES