ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಅವರು ನಿರ್ವಹಿಸುತ್ತಿದ್ದ ಖಾತೆ ಸಚಿವ ಡಿ.ವಿ ಸದಾನಂದ ಗೌಡ್ರಿಗೆ ಒಲಿದಿದೆ.
ಅನಂತ ಕುಮಾರ್ ಅವ್ರು ನಿರ್ವಹಿಸುತ್ತಿದ್ದ ರಾಸಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಇನ್ಮುಂದೆ ಸದಾನಂದ ಗೌಡರು ನಿರ್ವಹಿಸಲಿದ್ದಾರೆ. ಸಾಂಖ್ಯಿಕ ಖಾತೆಯನ್ನು ನಿರ್ವಹಿಸುತ್ತಿರೋ ಗೌಡ್ರಿಗೆ ಅನಂತ ಕುಮಾರ್ ಅವ್ರು ನಿರ್ವಹಿಸುತ್ತಿದ್ದ ಖಾತೆ ಹೆಚ್ಚುವರಿಯಾಗಿ ಲಭಿಸಿದೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ ಕುಮಾರ್ ಅವರು ಸೋಮವಾರ ಮುಂಜಾನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಶಂಕರ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಇಂದು ಅವರ ಅಂತ್ಯಸಂಸ್ಕಾರ ನೆರವೇರಿತು.
ಅನಂತ ಕುಮಾರ್ ಖಾತೆ ಡಿ.ವಿ ಸಂದಾನಂದ ಗೌಡ್ರಿಗೆ
TRENDING ARTICLES