Wednesday, May 22, 2024

ಅನಂತ ಕುಮಾರ್ ಅಗಲಿಕೆಗೆ ಕಣ್ಣೀರಿಟ್ಟ ಜೋಷಿ

ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನಕ್ಕೆ ಸಂಸದ ಪ್ರಹ್ಲಾದ್ ಜೋಷಿ ಕಣ್ಣೀರಿಟ್ಟೀದ್ದಾರೆ.
ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಆಗಬೇಕು ಅಂತ ಹೇಳಿದಾಗ, ಕೇಂದ್ರ ಸಚಿವ ಜೆಪಿ ನಡ್ಡಾ ಅವರೊಡನೆ ಮಾತಾಡಿದ್ರು. ನಡ್ಡಾ ಜೀ ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡ್ಬೇಕು ಅಂತ ಪ್ರಹ್ಲಾದ್ ಜೋಷಿ ಹೇಳ್ತಿದ್ದಾನೆ. ಜಾಗ ಕೊಡಿಸ್ತಾನಂತೆ. ಅಲ್ಲೊಂದು ಕ್ಯಾನ್ಸರ್ ಆಸ್ಪತ್ರೆ ಮಾಡಿಸಿ ಅಂತ ನಡ್ಡಾ ಅವರಿಗೆ ಹೇಳಿದ್ರು. ನಡ್ಡಾ ಅವ್ರು ರಾಜ್ಯ ಸರ್ಕಾರಕ್ಕೆ ಪ್ರೊಪೋಸಲ್ ಕಳುಹಿಸಿ ಇನ್ ಪ್ರಿನ್ಸಿಪಲ್ ಒಪ್ಪಿಗೆ ಕೊಟ್ಟು ಕಳುಹಿಸ್ತೀನಿ ಅಂತ ಹೇಳಿದ್ರು. ಆದರೆ, ಅನಂತ್​ ಜೀ ಅದೇ ಕ್ಯಾನ್ಸರ್ ನಿಂದ ಮೃತಪಟ್ಟಿರೋದು ಎಂಥಾ ದುರ್ದೈವ ನೋಡಿ ಅಂತ ಜೋಷಿ ದುಃಖಿತರಾದ್ರು.
ಅನಂತ್ ಅವರ ಅಗಲುವಿಕೆ ದೊಡ್ಡ ಆಘಾತವನ್ನುಂಟು ಮಾಡಿದೆ, ನಂಗೆ ಗೆಳೆಯ ಮಾತ್ರವಲ್ಲದೆ ಮಾರ್ಗದರ್ಶಕರೂ ಆಗಿದ್ದರು. ಪಾರ್ಲಿಮೆಂಟ್ ನಲ್ಲಿ ಕ್ಯಾಂಟಿನಲ್ಲಿ ಊಟ ಮಾಡಲು ಬಿಡ್ತಿರ್ಲಿಲ್ಲ. ನನ್ನ ಚೇಂಬರ್ ನಲ್ಲೇ ಊಟ ಮಾಡಬೇಕು ಅಂತ ಹೇಳ್ತಿದ್ರು. ಅಧಿವೇಶನದ ಟೈಮ್ ನಲ್ಲಿ ಊಟಕ್ಕೆ ಅವರ ಮನೆಗೇ ಕರೆದುಕೊಂಡು ಹೋಗುತ್ತಿದ್ದರು ಅಂತ ಹೇಳಿದ ಜೋಷಿ ಕಣ್ಣೀರು ಹಾಕಿದ್ರು.

ಅನಂತ ಕುಮಾರ್ ನಿಧನಕ್ಕೆ ಕಾಂಗ್ರೆಸ್ ನಾಯಕರ ಸಂತಾಪ

ಹೃದಯ ಭಾರವಾಗಿದೆ : ಅನಂತ ಕುಮಾರ್ ನಿಧನಕ್ಕೆ ಡಿವಿಎಸ್ ಸಂತಾಪ

ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅನಂತ ಕುಮಾರ್ ಕೊಡುಗೆ ಅಪಾರ : ಬಿಎಸ್ ವೈ

ಅನಂತ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ

ಯಾವ್ದೇ ಸರ್ಕಾರವಿದ್ದರೂ ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು ಅನಂತ್ ಕುಮಾರ್

ಕೇಂದ್ರ ಸಚಿವ ಅನಂತ್ ಕುಮಾರ್ ಇನ್ನಿಲ್ಲ

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ರಾಜಕಾರಣ ಮೀರಿದ ಸ್ನೇಹ ನಮ್ಮದು : ಸಿಎಂ

RELATED ARTICLES

Related Articles

TRENDING ARTICLES