Wednesday, May 22, 2024

ಎಷ್ಟು ದೈತ್ಯವೋ.. ಅಷ್ಟೇ ಉಗ್ರ ಪ್ರತಾಪಿ ಈ ಡೇಂಜರ್ ಹಲ್ಲಿ..!

ಮನೆ ಅಂದ್ಮೇಲೆ ಹಲ್ಲಿ ಇಲ್ಲ ಅಂದ್ರೆ ಹೆಂಗೆ..? ಆದ್ರೆ, ಮನೆಯಲ್ಲಿ ಹಲ್ಲಿ ಇವೆ ಅಂತ ಗೊತ್ತಿದ್ರೂ, ಗೋಡೆ ಮೇಲೆ ಬಂದಾಕ್ಷಣ ಒಂದಿಷ್ಟು ಮುಜುಗರ, ಭಯ ಸಹಜ. ಇನ್ನು ಮಕ್ಕಳಿಗೆ ಊಟ ತಿಂಡಿ ತಿನ್ನಿಸ್ಬೇಕು ಅಂದ್ರೆ, ಹಲ್ಲಿ ಬಂತು ನೋಡು, ಹೊತ್ಕೊಂಡು ಹೋಗುತ್ತೆ ಅಂತ ಹೆತ್ತವರು ಪೂಸಿ ಹೊಡೆಯೋದನ್ನು ನೋಡಿದ್ದೇವೆ. ಸಾಮಾನ್ಯವಾಗಿ ಮನೆ ಹಲ್ಲಿಗಳು ವಿಷಪೂರಿತವಾಗಿವೆ. ಅವೇನಾದ್ರೂ ಆಹಾರದಲ್ಲಿ ಬಿದ್ರೆ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಆದ್ರೆ, ನಾವಿಲ್ಲಿ ಹೇಳ್ತಿರೋ ಹಲ್ಲಿಗಳು ಮನೆ ಹಲ್ಲಿಗಳಿಗಿಂತ ಭಿನ್ನ ಹಾಗು ಸಿಕ್ಕಾಪಟ್ಟೆ ಡೇಂಜರ್‌.
ಹೆಸರಿಗೆ ಮಾತ್ರ ಹಲ್ಲಿ ಜಾತಿ, ಇದಿರೋದು ಡೈನೋಸಾರ್‌ ರೀತಿ..! ಎಷ್ಟು ದೈತ್ಯವೋ..ಅಷ್ಟೇ ಉಗ್ರ ಪ್ರತಾಪಿ, ಎದುರಿಗೆ ಬಂದ್ರೆ ಸಾವು ಕಟ್ಟಿಟ್ಟ ಬುತ್ತಿ..!
ನಮ್ ಭೂಮಿನಲ್ಲಿರೋ ಎಲ್ಲಾ ಹಲ್ಲಿಗಳ ಪೈಕಿ ಅತಿ ದೊಡ್ಡ ಜಾತಿಯ ಹಲ್ಲಿಯಂದ್ರೆ ಕೊಮೊಡೋ ಡ್ರಾಗನ್ಸ್.. ನಮ್ಮ ಮನೆಗಳ ಗೋಡೆಗಳ ಮೇಲೆ ಅಪರೂಪಕ್ಕಾದ್ರೂ ಹಲ್ಲಿಗಳನ್ನು ಕಂಡ್ರೆ ಅಸಹ್ಯ ಪಡೋ ಮಂದಿ, ಈ ದೊಡ್ಡ ಹಲ್ಲಿಗಳನ್ನಾ ನೋಡಿದ್ರೆ ಇನ್ನೇನು ಅಂತಾರೋ..?

ಇವುಗಳನ್ನು ಕೊಮೊಡೋ ಮಾನಿಟರ್‌ಗಳೆಂದು ಸಹ ಕರೀತಾರೆ. ಇವುಗಳನ್ನು ಇಂಡೊನೇಷ್ಯಾ ದ್ವೀಪಗಳಲ್ಲಿ ಹೆಚ್ಚಾಗಿ ನೋಡ್ಬಹುದು. ಈ ಹಲ್ಲಿಗಳು 10 ಅಡಿ ಉದ್ದ ಮತ್ತು 20 ಕೆಜಿ ತೂಕ ಇರ್ತವೆ. ಕೆಲವು ದೈತ್ಯ ಹಲ್ಲಿಗಳು 160 ಕೆಜಿಯಷ್ಟು ತೂಕ ಇರೋದುಂಟು. ಅಷ್ಟು ತೂಕವಿದ್ರೂ, ಗಂಟೆಗೆ 20 ಕಿಲೋಮೀಟರ್‌ ದೂರ ಹೋಗ್ತವೆ. ಈ ದೈತ್ಯ ಹಲ್ಲಿಗಳಿಗೆ ಮನುಷ್ಯರನ್ನು ಕಂಡ್ರೆ ಏನೋ ಪ್ರೀತಿ..!

ಸಾಮಾನ್ಯವಾಗಿ ಅವು ಮನುಷ್ಯರನ್ನು ಕಂಡ್ರೆ ಏನೂ ಮಾಡೋದಿಲ್ಲ. ಸುಮ್ಮನಿರ್ತವೆ. ಮನುಷ್ಯರ ಮೇಲೆ ಅಟ್ಯಾಕ್ ಮಾಡಿರೋ ಘಟನೆಗಳು ತುಂಬಾನೇ ಕಮ್ಮಿ. ಆದ್ರೆ, ಇವು ಎಷ್ಟು ದೈತ್ಯವೋ.. ಅಷ್ಟೇ ಉಗ್ರ ಪ್ರತಾಪಿ ಕೂಡ ಹೌದು.

ಇಂಡೊನೇಷ್ಯಾದ ಐಸ್‌ಲ್ಯಾಂಡ್‌ನ ಕೊಮೊಡೋ ಪ್ರದೇಶದಲ್ಲಿ ಹೆಚ್ಚಾಗಿ ಈ ಪ್ರಾಣಿಗಳು ಜೀವಿಸುತ್ತವೆ. ಹೀಗಾಗಿ, ಈ ಹಲ್ಲಿಗಳಿಗೆ ಕೊಮೊಡೋ ಡ್ರಾಗನ್ಸ್ ಅಂತ ಹೆಸರು ಬಂದಿದೆ. ಪಾಶ್ಚಿಮಾತ್ಯ ದೇಶಗಳ ಸಂಶೋಧಕರು 1910ರಲ್ಲಿ ಇವುಗಳನ್ನು ಪತ್ತೆ ಹಚ್ಚಿದ್ರು. ಜೊತೆಗೆ ಮೃಗಾಲಯಗಳಲ್ಲೂ ಇವುಗಳನ್ನು ಸಾಕಿ ಬೆಳೆಸೋದು ವಿಶೇಷ. ಹೆಸರಿಗೆ ಮಾತ್ರ ಹಲ್ಲಿ ಪ್ರಬೇಧ ಅಷ್ಟೇ.. ಆದ್ರೆ ವೆರೀ ಡೇಂಜರ್​..

ಕೊಮೊಡೋ ದ್ವೀಪದಲ್ಲಿ ವಾಸಿಸೋ ಜನ್ರು ಇವುಗಳನ್ನಾ ಓರಾ, ಬೂಜಾದುರತ್ (ora, buaja durat) ಅಂತ ಕರೆಯುತ್ತಾರೆ. ಕೊಮೊಡೋ ಡ್ರಾಗನ್ ಗಳು ತಣ್ಣನೆಯ ರಕ್ತವುಳ್ಳ ಜೀವಿಗಳು. ವಿಚಿತ್ರ ಅಂದ್ರೆ, ಯಾವ್ದೇ ಪ್ರದೇಶವಾದ್ರೂ, ಆ ವಾತಾವರಣಕ್ಕೆ ಹೊಂದಿಕೊಂಡು ಜೀವಿಸೋ ಗುಣ ಇದೆ. ಈ ಹಲ್ಲಿಗಳ ಹಲ್ಲುಗುಳು ತುಂಬಾ ಶಾರ್ಪ್.. 2.5 ಸೆಂಟಿಮೀಟರ್‌ ನಷ್ಟು ಉದ್ದವಾಗಿರ್ತವೆ.. ನಾಲಿಗೆ ಕೂಡ ಬಹಳ ಉದ್ದ ಇದೆ. ಅರಿಶಿಣದ ಬಣ್ಣದಿಂದ ಕೂಡಿರುತ್ತದೆ. ನೀಲಿ, ಕಿತ್ತಳೆ, ಹಸಿರು, ಬೂದು ಅಥವಾ ಕಂದು ಬಣ್ಣಗಳಿರೋ ದೈತ್ಯ ಹಲ್ಲಿಗಳನ್ನೂ ನಾವಿಲ್ಲಿ ನೋಡ್ಬಹುದು.

ದೈತ್ಯ ಹಲ್ಲಿಗಳು ಬೇಟೆಗೆ ನಿಂತ್ರೆ, ಬೇಟೆ ಮಿಸ್ಸೇ ಆಗಲ್ಲ

ಕೊಮೊಡೋ ಡ್ರಾಗನ್ಸ್ ಯಾವಾಗ್ಲೂ ಜೊಲ್ಲು ಸುರಿಸುತ್ತಿರ್ತವೆ. ಸಾಮಾನ್ಯವಾಗಿ ಅವುಗಳ ಬಾಯಿ ತೆರೆದುಕೊಂಡಾಗ ಹಲ್ಲುಗಳು ಕಾಣ್ಸಲ್ಲ.. ಆದ್ರೆ, ಬೇರೆ ಪ್ರಾಣಿಗಳ ಮೇಲೆ ಅಟ್ಯಾಕ್ ಮಾಡೋ ಟೈಂನಲ್ಲಿ ಇದ್ದಕ್ಕಿದ್ದಂತೆ ಹಲ್ಲುಗಳು ಚಕ್ ಅಂತ ಈಚೆ ತೆರೆದುಕೊಳ್ತವೆ. ಆ ಹಲ್ಲುಗಳಿಂದ ಬಿಡೋ ರಸ ಪ್ರಾಣಿಯ ದೇಹ ಹೊಕ್ಕರೆ ಸಾಕು ಅದು ಸುಸ್ತಾದಂತೆ ನಡೆದು ಒಂದು ಕಡೆ ಬೀಳುತ್ತೆ.. ಇನ್ನು ಬೇಟೆ ಸಿಕ್ಕರೆ ಕೇಳ್ಬೇಕಾ..? ದೈತ್ಯ ಹಲ್ಲಿಗಳು ಬೇಟೆಯನ್ನು ಹರಿದು ಹಂಚಿ ತಿಂದು ಮುಗಿಸ್ತವೆ.

ಊಟಕ್ಕಾಗಿ ಕೊಮೊಡೋ ಡ್ರಾಗನ್‌ಗಳ ಕಚ್ಚಾಟ..! ಬಹಳ ಆಕ್ರಮಣಕಾರಿಯಾಗಿರುತ್ತದೆ ಇವುಗಳ ಬೇಟೆ
ನಡೆದು ಬಂದ್ರೆ ಪಕ್ಕಾ ಡೈನೋಸಾರ್ ಥರ ಕಾಣೋ ಈ ಕೊಮೊಡೋಗಳು ಬೇಟೆಯಾಡೋ ರೀತಿ ತುಂಬಾನೇ ಡಿಫ್ರೆಂಟ್. ಕೊಮೊಡೋಗಳ ಬಾಯಿಗೆ ಬೇಟೆ ಬಿದ್ರೆ, ಅದು ತಪ್ಪಿಸಿಕೊಳ್ಳೋ ಚಾನ್ಸೇ ಇಲ್ಲ. ತಿಂದು ಮುಗಿಸೋ ವರೆಗೂ ಅಲ್ಲಿಂದ ಕದ್ಲೋದಿಲ್ಲ.. ಸಿಕ್ಕ ಊಟ ತಿನ್ನೋಕೆ ಎಷ್ಟೋ ಬಾರಿ ಕೊಮೊಡೋ ಡ್ರಾಗನ್‌ಗಳು ಕಚ್ಚಾಡುತ್ತಿರುತ್ತವೆ.

ಕೊಮೊಡೋಗಳು ತಮ್ಮ ಸೇಫ್ಟಿಗಾಗಿ ದೊಡ್ಡ ಗುಣಿ ತೊಡ್ತವೆ. ಇಂತಹ ಗುಣಿಗಳು 1ರಿಂದ 3 ಮೀಟರ್‌ ಆಳ ಇರ್ತವೆ. ರಾತ್ರಿ ವೇಳೆ ಬೆಚ್ಚಗೆ ಮಲಗಲು ಈ ಗುಣಿಗಳು ಇವಕ್ಕೆ ಆಶ್ರಯವಾಗಿವೆ. ಇನ್ನು ಬೆಚ್ಚಗೆ ಮಲಗಿ ಬರೋ ಡ್ರಾಗನ್‌ಗಳು ಮಧ್ಯಾಹ್ನದ ವೇಳೆಗೆ ಬೇಟೆಯಾಡಲು ಶುರುಮಾಡ್ತವೆ. ಅವುಗಳ ಆಕ್ರಮಣಕಾರಿ ದಾಳಿ ನೋಡಿದ್ರೆ ಇವೇನು ಹಲ್ಲಿಗಳಾ, ಅಥ್ವಾ ಡೈನೋಸಾರ್‌ಗಳಾ ಅಂತ ಡೌಟ್ ಬರುತ್ತೆ..

 

ಪ್ರಾಣಿಯ ಬಾಲ, ಕಾಲು ಹಿಡಿದ್ರೆ ತಪ್ಪಿಸಿಕೊಳ್ಳೋ ಮಾತೇ ಇಲ್ಲ..! ಹಿಗ್ಗಿಸೋ ದೇಹದಲ್ಲಿ ದೊಡ್ಡ ಪ್ರಾಣಿಯೂ ಆಗುತ್ತೆ ಜೀರ್ಣ..!
ಪ್ರಾಣಿಗಳ ಬಾಲ ಅಥವಾ ಹಿಂದಿನ ಕಾಲುಗಳನ್ನು ಮೊದಲು ಹಿಡಿಯೋ ಈ ಡ್ರಾಗನ್‌ಗಳ ಕೈಯಿಂದ, ಜಪ್ಪಯ್ಯ ಅಂದ್ರೂ ಬೇಟೆ ಪ್ರಾಣಿ ತಪ್ಪಿಸಿಕೊಳ್ಳೋಕೆ ಬಿಡಲ್ಲ.. ಬೇಟೆಯಾಡಿದ ಪ್ರಾಣಿಯನ್ನು ನುಂಗುವಾಗ ಹೊಟ್ಟೆಯನ್ನು ಹಿಗ್ಗಿಸುತ್ತದೆ. ದವಡೆಯಲ್ಲಿ ಉತ್ಪತ್ತಿಯಾಗೋ ಜೊಲ್ಲು , ತಿಂದ ಆಹಾರವನ್ನು ಸರಾಗವಾಗಿ ಹೊಟ್ಟೆ ಭಾಗ ಸೇರೋ ಹಾಗೆ ಮಾಡುತ್ತದೆ.

ಸಿಕ್ಕ ಬೇಟೆಯನ್ನು ತಿಂದು ಮುಗಿಸೋಕೆ ಬೇಕು 20 ನಿಮಿಷ ..ಸಾಫ್ಟ್ ಅಂತ ಹತ್ರ ಹೋದ ಮನುಷ್ಯನ ಮೇಲೂ ಅಟ್ಯಾಕ್
ಆದ್ರೆ, ಹಾಗೆ ತಿಂದು ಮುಗಿಸೋಕೆ 15 ರಿಂದ 20 ನಿಮಿಷ ಟೈಂ ತೆಗೆದುಕೊಳ್ಳುತ್ತೆ.. ಅದರ ದೇಹದ ತೂಕಕ್ಕೆ ತಕ್ಕಂತೆ ಅದು ಶೇಕಡ 80 ರಷ್ಟು ಆಹಾರವನ್ನಷ್ಟೇ ತಿನ್ನೋಕೆ ಸಾಧ್ಯ.. ತಿಂದ ಮಾತ್ರಕ್ಕೆ ಎಲ್ಲವನ್ನೂ ಜೀರ್ಣಿಸಿಕೊಳ್ಳೋದಿಲ್ಲ.. ನುಂಗಿದ ಪ್ರಾಣಿಯ ಹಲ್ಲು, ಮೂಳೆ,ಕೂದಲು ಭಾಗನಾ ಅದು ವಾಂತಿ ಮಾಡುತ್ತೆ..
ಇಂಥಾ ದೈತ್ಯ ಹಲ್ಲಿಗಳು ಬರ್ತಾ ಬರ್ತಾ ಝೂಗಳಲ್ಲಿ ಶೋ ಕೊಡೋಕೂ ಶುರುಮಾಡಿವೆ.. ಅಂದ್ರೆ, ಅದ್ರ ದೈತ್ಯ ಆಕಾರ, ಅದ್ರ ವಿಶೇಷ ಗುಣಗಳು ಇಂದು ವಿಶ್ವದ ಪ್ರಸಿದ್ಧ ಮೃಗಾಲಯಗಳಲ್ಲಿ ಹೆಚ್ಚು ಆಕರ್ಷಣೆ ಪಡೆಯುತ್ತವೆ..
ಸಾಮಾನ್ಯವಾಗಿ ಮನುಷ್ಯರ ಮೇಲೆ ಈ ಡ್ರಾಗನ್ ಗಳು ಅಟ್ಯಾಕ್​ ಮಾಡೋದು ಕಡಿಮೆ.. ಆದ್ರೆ, 2001ರ ಜೂನ್ ನಲ್ಲಿ ಲಾಸ್‌ಏಂಜಲೀನ್ ಮೃಗಾಲಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಕ್ರೊನಿಕಲ್ನ ಕಾರ್ಯ ನಿರ್ವಾಹಕ ಸಂಪಾದಕ ಪಿಲ್ ಬ್ರೋನ್‌ಸೈನ್ ಮೇಲೆ ಈ ಹಲ್ಲಿ ಅಟ್ಯಾಕ್ ಮಾಡಿತ್ತು.
2007ರ ಜೂನ್ 4 ಕೊಮೊಡೋ ದ್ವೀಪದಲ್ಲಿ 8 ವರ್ಷದ ಹುಡುಗನ ಮೇಲೂ ದಾಳಿ ಮಾಡಿತ್ತು.. ಸ್ವಲ್ಪ ದಿನಗಳ ನಂತರ ಆ ಬಾಲಕ ಸತ್ತ್ಹೋದ.. ಅಲ್ಲಿವರೆಗೂ ಈ ದೈತ್ಯ ಹಲ್ಲಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಅಂತ ಗೊತ್ತೇ ಇರಲಿಲ್ಲ.. ಈ ಇನ್ಸಿಡೆಂಟ್​ಗಳನ್ನು ಬಿಟ್ರೆ ಆಮೇಲೆ ಇಂಥಾ ಘಟನೆಗಳು ನಡ್ದೇ ಇಲ್ಲ ಅಂತ ಹೇಳ್ಬಹುದು.

ಫಿಲ್ಮ್‌ಗಳಲ್ಲೂ ಅಬ್ಬರಿಸಿವೆ ಈ ದೈತ್ಯ ಹಲ್ಲಿಗಳು ಡೈನೋಸಾರ್​ ಬಂತು ಅಂತ ಬೆಚ್ಚಿ ಬಿದ್ದ ಪ್ರೇಕ್ಷಕರುಕೊಮೊಡೋ ಡ್ರಾಗನ್‌ಗಳನ್ನು ಫಿಲ್ಮ್‌ಗಳಲ್ಲಿ ಕಂಡು ಬೆರಗಾದವರು ಇದ್ದಾರೆ. ಏನಪ್ಪಾ ಈ ದೈತ್ಯ ಹಲ್ಲಿ ಹೀಗಿದೆ, ಇದೇನೋ ಡೈನೋಸಾರಾ ಅಂತ ನಿಬ್ಬೆರಗಾದವರು ಇದ್ದಾರೆ.. ಚಿತ್ರಗಳಲ್ಲಿ ಅದು ಅಟ್ಯಾಕ್ ಮಾಡೋ ರೀತಿ ನೋಡಿದ್ರೆ ಇಷ್ಟೊಂದು ಭಯವಾಗುತ್ತೆ..

1999ರಲ್ಲಿ ತೆರೆ ಕಂಡಿದ್ದ ಕೊಮೊಡೋ ಚಿತ್ರ ಇದು..
ಇನ್ನು, ಕರ್ಸ್ ಆಫ್ ದ ಕೊಮೊಡೋ ಅನ್ನೋ ಚಿತ್ರ 2004ರಲ್ಲಿ ಪ್ರೇಕ್ಷಕರನ್ನೂ ಬೆಚ್ಚಿ ಬೀಳಿಸಿತ್ತು. ಹೀಗೆ, 2005 ರಲ್ಲೂ ಮತ್ತೊಂದು ಚಿತ್ರ ಬಂದಿತ್ತು.. ಅದ್ರ ಹೆಸ್ರು ಕೊಮೊಡೋ vs ಕೋಬ್ರಾ ಅಂತ..
ಇದಷ್ಟೇ ಅಲ್ಲ, ಪ್ರತಿ ಸಲ ಹೊಸ ಹೊಸ ಅವತಾರಗಳಲ್ಲಿ ಈ ದೈತ್ಯ ಹಲ್ಲಿಗಳನ್ನು ಪ್ರೇಕ್ಷಕರ ಮುಂದೆ ತರೋ ಪ್ರಯತ್ನಗಳು ನಡೆಯುತ್ತಲೇ ಇವೆ. ಬೇರೆ ಬೇರೆ ಚಿತ್ರಗಳಾದ್ರೂ ಆಗಾಗ ಎಂಟ್ರಿ ಕೊಡೋ ಇಂತಹ ದೈತ್ಯ ಹಲ್ಲಿಗಳು ಜನರನ್ನು ಭಯ ಪಡಿಸಿ ಹೋಗುತ್ತವೆ. ಅಂತಹ ಚಿತ್ರಗಳು ಸಾಕಷ್ಟು ಬಂದು ಹೋಗಿವೆ..
ಬಾಲಿವುಡ್ ಬಾದ್ ಶಾಗೂ ನಡುಕ ಹುಟ್ಟಿಸಿತ್ತು ಈ ಹಲ್ಲಿ..!
ಅಷ್ಟೇ ಯಾಕೆ.. ದುಬೈಗೆ ಹೋಗಿದ್ದ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರಿಕೆ ಕಾಟ ಕೊಟ್ಟಿದ್ದು, ಇದೇ ಕೊಮೊಡೊ ಡ್ರಾಗನ್‌.. ಟಿವಿ ನಿರೂಪಕಿ ಜೊತೆ ಮರುಭೂಮಿಯಲ್ಲಿ ಚಿತ್ರೀಕರಣಕ್ಕೆ ಹೋಗೋ ವೇಳೆ ಕೊಮೊಡೊ ಡ್ರಾಗನ್ ವೇಷ ಧರಿಸಿದ್ದ ವ್ಯಕ್ತಿ ಅವರನ್ನ ಬೆದರಿಸಿದ್ದ.. ಕೋಪಗೊಂಡ ಬಾದ್ ಶಾ ಅಣುಕು ಪ್ರದರ್ಶನ ಕೊಟ್ಟ ವ್ಯಕ್ತಿಯನ್ನು ಅಟ್ಟಾಡಿಸಿ ಗುದ್ದಿದ್ರು.
ಈ ಇಂಡೋನೇಷ್ಯಾದ ಕೊಮೊಡೊ ಡ್ರಾಗನ್‌ಗಳು ಎಷ್ಟರ ಮಟ್ಟಿಗೆ ಭಯ ಹುಟ್ಟಿಸುತ್ತವೆ ಅಂತ ನೋಡಿದ್ರಲ್ಲಾ..! ವಿಶೇಷ ಅಂದ್ರೆ, ಇಂಡೋನೇಷ್ಯಾದಲ್ಲಿ 50 ರುಪೈ ಕಾಯಿನ್ ಮೇಲೆ ಕೊಮೊಡೋ ಡ್ರಾಗನ್ ಅಚ್ಚು ಕಾಣಬಹುದು.

RELATED ARTICLES

Related Articles

TRENDING ARTICLES