ಮಹಿಳಾ ವರ್ಲ್ಡ್ ಕಪ್ ನ ಫಸ್ಟ್ ಮ್ಯಾಚ್ ನಲ್ಲಿ ಅಮೋಘ ಜಯ ಸಾಧಿಸಿದ ಟೀಮ್ ಇಂಡಿಯಾ ಇಂದು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣೆಸೋಕೆ ರೆಡಿಯಾಗಿದೆ.
ಬಿ ಗುಂಪಿನ ಮೊದಲ ಮ್ಯಾಚ್ ನಲ್ಲೇ ಬಲಿಷ್ಠ ನ್ಯೂಜಿಲೆಂಡನ್ನು 34 ರನ್ ಗಳಿಂದ ಭಾರತ ಮಣಿಸಿತ್ತು. ಆ ಮ್ಯಾಚ್ ನಲ್ಲಿ ಅನಾರೋಗ್ಯದ ನಡುವೆಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ದಾಖಲೆಯ ಶತಕ ಸಿಡಿಸಿದ್ರು. ಯುವ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಹಾಫ್ ಸೆಂಚುರಿ ಬಾರಿಸಿದ್ರು. ಫಸ್ಟ್ ಮ್ಯಾಚ್ ನಲ್ಲೇ ಸಂಘಟಿತ ಹೋರಾಟ ನೀಡಿರೋ ಭಾರತೀಯ ವನಿತೆಯರನ್ನು ಕಟ್ಟಿಹಾಕುವುದು ಜವೇರಿಯಾ ಖಾನ್ ನಾಯಕತ್ವದ ಪಾಕ್ ಗೆ ಕಠಿಣ ಸವಾಲೇ ಸರಿ.
2016ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ ಸೋಲುಂಡಿತ್ತು. ಆದರೆ, ನಂತರ ನಡೆದ ಏಷ್ಯಾಕಪ್ ನ 3 ಪಂದ್ಯಗಳಲ್ಲೂ ಭಾರತ ಜಯಸಿದೆ.ಭಾರತ,ಪಾಕಿಸ್ತಾನ ಟಿ20 ಮಾದರಿಯಲ್ಲಿ 10 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ 8 ಮ್ಯಾಚ್ ಗಳಲ್ಲಿ ಗೆದ್ದಿದ್ರೆ. 2 ಮ್ಯಾಚ್ ಗಳಲ್ಲಿ ಪಾಕ್ ಗೆದ್ದಿದೆ.
ಇನ್ನು ಈ ಟೂರ್ನಿಯ ಮೊದಲ ಮ್ಯಾಚ್ ನಲ್ಲಿ ಪಾಕಿಸ್ತಾನ ವನಿತೆಯರು ಆಸ್ಟ್ರೇಲಿಯಾ ವಿರುದ್ಧ 52 ರನ್ ಅಂತರದಿಂದ ಸೋತಿದ್ದಾರೆ. ಇದು ಭಾರತದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಅದರೂ ಪಾಕ್ ನಲ್ಲಿ ಆಕ್ರಮಣಕಾರಿ, ಅನುಭವಿ ಆಟಗಾರ್ತಿಯರಿದ್ದಾರೆ. ನಾಯಕಿ ಜವೇರಿಯಾ ಖಾನ್, ಸನಾ ಮೀರ್, ನಾಹಿದಾ ಖಾನ್ ಹಾಗೂ ಬಿಸ್ಮಾ ಮರೂಫ್ ಪಾಕ್ ತಂಡದ ಶಕ್ತಿಯಾಗಿದ್ದಾರೆ.
-ವಸಂತ್ ಮಳವತ್ತಿ. ಸ್ಪೋರ್ಟ್ಸ್ ಬ್ಯೂರೋ. ಪವರ್ ಟಿವಿ