ಪೊಲೀಸರು ಪೊಲೀಸರನ್ನೇ ಅರೆಸ್ಟ್ ಮಾಡ್ಬೇಕಾದ ಸ್ಥಿತಿ ಬಂದಿದೆ. ಮನಿ ಡಬ್ಲಿಂಗ್ ದಂಧೆಯಲ್ಲಿ ಡಿವೈಎಸ್ ಪಿ ಒಬ್ರು ಸಿಕ್ಕಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಡಿವೈಎಸ್ ಪಿ ನಾಂಗೇಂದ್ರ ಆರೋಪಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗೇಂದ್ರ ಸೇರಿದಂತೆ ಮೂವರು ಅರೆಸ್ಟ್ ಆಗಿದ್ದಾರೆ. ಡಿವೈಎಸ್ ಪಿ ನಾಗೇಂದ್ರ ಜೊತೆ ಅರೆಸ್ಟ್ ಆಗಿರೋ ಆರೋಪಿ ಪೊಲೀಸರು ಸಂತೋಷ್ ಮತ್ತು ವೆಂಕಟ್ ಅಂತ ಗುರುತಿಸಲಾಗಿದೆ.
ಮನಿ ಡಬ್ಲಿಂಗ್ ಮಾಡಿಕೊಡೋದಾಗಿ ಹೇಳಿ 13 ಲಕ್ಷ ರೂ ಪಡೆದಿದ್ದಾರೆ ಅಂತ ಶಿವಕುಮಾರ್ ಅನ್ನೋರು ಆರೋಪಿಸಿದ್ದಾರೆ. ಜಾಲಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದ್ದು, ಎಸಿಪಿ ರವಿಪ್ರಸಾದ್ ನೇತೃತ್ವದಲ್ಲಿ ಆರೋಪಿ ಪೊಲೀಸ್ರನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ಮನಿ ಡಬ್ಲಿಂಗ್ ದಂಧೆಯಲ್ಲಿ ಸಿಕ್ಕಿಬಿದ್ದ ಡಿವೈಎಸ್ ಪಿ..!
TRENDING ARTICLES