Tuesday, October 15, 2024

ಮೋದಿಯನ್ನು ಜೀವಂತ ಸುಡುವ ಕಾಲ ಬಂದಿದೆ – ಟಿ.ಬಿ ಜಯಚಂದ್ರ

ಪ್ರಧಾನಿ ನರೇಂದ್ರ ಮೋದಿಯನ್ನು ಜೀವಂತ ಸುಡುವ ಕಾಲ ಬಂದಿದೆ ಅಂತ ಮಾಜಿ ಸಚಿವ ಟಿ.ಬಿ ಜಯಚಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ನೋಟು ಬ್ಯಾನ್ ಮಾಡಿ 2 ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರತಿಪಕ್ಷಗಳು ಪ್ರತಿಭಟನೆ ನಡೆಸ್ತಾ ಇವೆ. ಅಂತೆಯೇ ತುಮಕೂರಿನಲ್ಲೂ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಟಿ.ಬಿ ಜಯಚಂದ್ರ, ” ಪ್ರಧಾನಿ ನರೇಂದ್ರ ಮೋದಿ ಅವ್ರನ್ನು ಜೀವಂತವಾಗಿ ಸುಡೋ ಕಾಲ ಬಂದಿದೆ. ನೋಟ್ ಬ್ಯಾನ್ ಮಾಡಿದ ವೇಳೆ ಪ್ರಧಾನಿ ಮೋದಿಯವರೇ 50 ದಿನ ಕಾಲವಕಾಶ ಕೊಡಿ ಇದ್ರಲ್ಲಿ ಗೆದ್ದು ಬರ್ತೀನಿ, ಇಲ್ದೇ ಇದ್ರೆ ನನ್ನನ್ನು ಜೀವಂತವಾಗಿ ಸುಡಿ ಅಂದಿದ್ರು. ಇಂದು ಬಹುಶಃ ಅವ್ರನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ” ಅಂದ್ರು.
ಪ್ರಧಾನಿ ಮೋದಿ ಅವ್ರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ರೆ ರಾಜಿನಾಮೆ ಕೊಟ್ಟು ಮನೆಗೆ ಹೋಗ್ಬೇಕು ಅಂತ ಹೇಳಿದ್ರು.
ಪ್ರತಿಭಟನೆಗೆ ಕತ್ತೆಯನ್ನು ಬಳಸಿಕೊಳ್ಳುವುದಲ್ಲ. ಕೇಂದ್ರವನ್ನು ಕತ್ತೆಗೆ ಹೋಲಿಸಲು ಆಗಲ್ಲ. ಅದು ಎಂದೂ 420 ಕೆಲ್ಸ ಮಾಡಲ್ಲ. ಗುಳ್ಳೆನರಿಯನ್ನು ತಂದಿದ್ರೆ ಬಹಳಾ ಚೆನ್ನಾಗಿರ್ತಿತ್ತು ಅಂತ ಕೇಂದ್ರ ಸರ್ಕಾರವನ್ನು ಗುಳ್ಳೆನರಿಗೆ ಹೋಲಿಸಿದ್ರು.

https://www.youtube.com/watch?v=H_a2AGdh26U

RELATED ARTICLES

Related Articles

TRENDING ARTICLES