ಕೊಪ್ಪಳ : ರೈತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಬ್ಯಾಂಕ್ ನೋಟಿಸ್ ಕಂಡು ಇವರಿಗೆ ಹೃದಯಾಘಾತ ಆಗಿದೆ ಅಂತ ಕುಟುಂಬದವ್ರು ಆರೋಪಿಸಿದ್ದಾರೆ.
ಯಲಬುರ್ಗಾ ತಾಲೂಕಿನ ರಾಜನೂರಿನ 75 ವರ್ಷದ ಈಳಗೇರ ಮೃತ ರೈತ. ಇವ್ರು 2015ರಲ್ಲಿ ಸಂಗನಾಳ ಗ್ರಾಮದ ಪ್ರಗತಿ ಕೃಷ್ಣಾ ಬ್ಯಾಂಕ್ ನಿಂದ ಸಾಲ ಪಡೆದಿದ್ರು. ಬಡ್ಡಿ ಸೇರಿ 16,96,000 ರೂ ಕಟ್ಟಬೇಕಿತ್ತು. ಸಾಲ ಮರು ಪಾವತಿ ಮಾಡಿ ಅಂತ ಬ್ಯಾಂಕ್ ಅಕ್ಟೋಬರ್ 4ರಂದು ನೋಟಿಸ್ ನೀಡಿತ್ತು. ಹಣ ಕಟ್ಟದೇ ಇದ್ರೆ ಆಸ್ತಿ ಮುಟ್ಟುಗೋಲು ಹಾಕಲಾಗುತ್ತೆ ಅಂತ ನೋಟಿಸ್ ನಲ್ಲಿ ಹೇಳಲಾಗಿತ್ತು. ಈ ನೋಟಿಸ್ ಕಂಡು ಈಳಗೇರ ಹಾಸಿಗೆ ಹಿಡಿದಿದ್ರು ಅಂತ ಹೇಳಲಾಗ್ತಿದೆ. ನಿನ್ನೆ ಈರಪ್ಪ ಹಾರ್ಟ್ ಅಟ್ಯಾಕ್ ನಿಂದ ಕೊನೆಯುಸಿರೆಳೆದಿದ್ದು, ಬ್ಯಾಂಕ್ ನೋಟಿಸೇ ಇದಕ್ಕೆ ಕಾರಣ ಅಂತ ಅವ್ರ ಮಗ ಕಲ್ಲಪ್ಪ ಆರೋಪ ಮಾಡ್ತಿದ್ದಾರೆ.
ಬ್ಯಾಂಕ್ ನೋಟಿಸ್ ಕಂಡು ರೈತ ಸಾವು..?
TRENDING ARTICLES