Wednesday, May 22, 2024

ಧೋನಿ ನಂತರ ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಕೊಹ್ಲಿ ಅಲ್ಲ ರೋಹಿತ್..

ಹಿಟ್ ಮ್ಯಾನ್ ರೋಹಿತ್ ಶರ್ಮಾ ಈಗ ಡಬಲ್ ಸೆಂಚುರಿ ಸ್ಟಾರ್ ಮಾತ್ರವಲ್ಲ. ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ನಂತರ ಭಾರತದ ಬೆಸ್ಟ್ ಕ್ಯಾಪ್ಟನ್ ಅನ್ನೋ ಕೀರ್ತಿಗೆ ಪಾತ್ರರಾಗಿದ್ದಾರೆ. ಧೋನಿ ನಂತರದ ಭಾರತದ ಬೆಸ್ಟ್ ಕ್ಯಾಪ್ಟನ್ ಟೀಮ್ ಇಂಡಿಯಾದ ಖಾಯಂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಲ್ಲ, ರೋಹಿತ್ ಶರ್ಮಾ..! ಐಪಿಎಲ್ ನ ಯಶಸ್ವಿ ನಾಯಕರಾಗಿರೋ ರೋಹಿತ್ ಶರ್ಮಾ ಇಂಟರ್ ನ್ಯಾಷನಲ್ ಕ್ರಿಕೆಟ್ ನಲ್ಲೂ ಯಶಸ್ವಿ ಕ್ಯಾಪ್ಟನ್ ಆಗಿದ್ದಾರೆ. ಏಷ್ಯಾಕಪ್, ನಿದಹಾಸ್ ಟ್ರೋಫಿ ಗೆದ್ದು ಕೊಟ್ಟಿರೋ ರೋಹಿತ್ ಶರ್ಮಾ ಇದುವರೆಗೆ 8 ಒಡಿಐ ಹಾಗೂ 11 ಟಿ20 ಮ್ಯಾಚ್ ಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಒಟ್ಟು 19 ಮ್ಯಾಚ್ ಗಳಲ್ಲಿ ಸೋತಿದ್ದು ಎರಡು ಮ್ಯಾಚ್ ಗಳನ್ನು ಮಾತ್ರ. ಒಡಿಐ ಮತ್ತು ಟಿ20ಯ ಸತತ 11 ಮ್ಯಾಚ್ ಗಳಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ ಗೆದ್ದಿದೆ.

RELATED ARTICLES

Related Articles

TRENDING ARTICLES