Friday, September 20, 2024

ಶಿವಮೊಗ್ಗದಲ್ಲಿ ಮಾತ್ರ ಅರಳಿದ ಕಮಲ

ಉಪ ಸಮರದಲ್ಲಿ ಕೇವಲ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿದೆ. ಶಿವಮೊಗ್ಗ ಲೋಕಸಭಾ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಕ್ಯಾಂಡಿಡೇಟ್ ಬಿ.ವೈ ರಾಘವೇಂದ್ರ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ವಿರುದ್ಧ 52,168 ಮತಗಳ ಅಂತರದ ಗೆಲುವು ಪಡೆದಿದ್ದಾರೆ.
ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಎಸ್ ಯಡಿಯೂರಪ್ಪ ಅವರಿಗಿಂತ ಅತಿ ಹೆಚ್ಚು ಮತಗಳ ಅಂತರದಿಂದ ಬಿ.ವೈ ರಾಘವೇಂದ್ರರವರನ್ನ ಗೆಲ್ಲಿಸಬೇಕೆಂಬ ಬಿಜೆಪಿ ಕನಸು ನನಸಾಗಲಿಲ್ಲ.
ಜೆಡಿಎಸ್-ಕಾಂಗ್ರೆಸ್ ನ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ-4,91,158 ಬಿವೈಆರ್-5,43,306, ಜೆಡಿಯುನ ಮಹಿಮಾ ಪಟೇಲ್-8,713,ಪಕ್ಷೇತರ ಅಭ್ಯರ್ಥಿ ಶಶಿಕುಮಾರ್ -17,189 ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 10,687 ಮತಗಳು ಬಂದಿವೆ.
ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಈ ಕಣದಲ್ಲಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮಗ ಬಿ.ವೈ ರಾಘವೇಂದ್ರ, ಎಸ್. ಬಂಗಾರಪ್ಪ ಅವರ ಮಗ ಮಧುಬಂಗಾರಪ್ಪ ಹಾಗೂ ಜೆ.ಎಚ್ ಪಟೇಲ್ ಅವರ ಮಗ ಮಹಿಮಾ ಪಟೇಲ್ ಸ್ಪರ್ಧಿಸಿದ್ದರು. ಬಿ.ಎಸ್ ವೈ ಪುತ್ರ ಗೆಲುವಿನ ಕೇಕೆ ಹಾಕಿದ್ದಾರೆ.

RELATED ARTICLES

Related Articles

TRENDING ARTICLES