Sunday, July 14, 2024

‘ಕಿರಿಕ್ ಪಾರ್ಟಿ’ ಲೈಫ್ ಗೆ ಹೊಸ ಬೆಡಗಿ ಎಂಟ್ರಿ..! ರಶ್ಮಿಕಾ ಪ್ಲೇಸ್ ಗೆ ಬಂದ ಆ ಚೆಲುವೆ ಯಾರ್ ಗೊತ್ತಾ..?

ಕಿರಿಕ್ ಪಾರ್ಟಿ ಅಂದ್ರೆ ಖಂಡಿತಾ ನೀವು ಕಿರಿಕ್ ಮಾಡೋ ಪಾರ್ಟಿ ಅಂತ ಅನ್ಕೊಳಲ್ಲ. ಕಿರಿಕ್ ಪಾರ್ಟಿ ಅಂದ ಕೂಡಲೇ ನೆನಪಾಗೋದು ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗ್ಡೆ. ಅದ್ರಲ್ಲೂ ಕಿರಿಕ್ ಜೋಡಿ ಅಂದ್ರೆ ಎಲ್ಲರಿಗೂ ಥಟ್ ಅಂತ ಯೋಚ್ನೆ ಮಾಡೋದು ಒಂದು ಕಾಲದ ಕ್ಯೂಟೆಸ್ಟ್ ಜೋಡಿ ರಕ್ಷಿತ್ -ರಶ್ಮಿಕಾ ಅಂತ.
ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ಯಲ್ಲಿ ಹೀರೋ, ಹೀರೋಯಿನ್ ಆಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ರಕ್ಷಿತ್ ಮತ್ತು ರಶ್ಮಿಕಾ ರಿಯಲ್ ಲೈಫ್ ನಲ್ಲೂ ಜೊತೆಯಾಗಿ ಇರಲು ಹೊರಟಿದ್ರು. ಅಂದ್ರೆ, ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಎರಡೂ ಫ್ಯಾಮಿಲಿಯ ಒಪ್ಪಿಗೆ ಪಡೆದು ಎಂಗೇಜ್ ಮೆಂಟ್ ಮಾಡಿಕೊಂಡಿದ್ರು. ಆದ್ರೆ, ಅದೇನಾಯ್ತೋ ಇದ್ದಕ್ಕಿದ್ದಂತೆ ಇಬ್ಬರೂ ದೂರ ಆಗಿಬಿಟ್ರು. ಇವರ ಬ್ರೇಕಪ್ ಗೆ ಕಾರಣ ಏನು ಅಂತ ಇಬ್ಬರೂ ಕೂಡ ಇವತ್ತಿಗೂ ಹೇಳಿಲ್ಲ. ಒಂದಿಷ್ಟು ಅಂತೆ-ಕಂತೆ ಅಂತ ನ್ಯೂಸ್ ಗಳು ಹರಿದಾಡಿದ್ದು ಬಿಟ್ಟರೆ ಬ್ರೇಕಪ್ ಗೆ ನಿಜವಾದ ಕಾರಣ ಏನು ಅಂತ ಗೊತ್ತೇ ಆಗಿಲ್ಲ.


ಇಬ್ಬರೂ ದೂರ ದೂರ ಇದ್ದು, ಸಿನಿಮಾ, ಕರಿಯರ್ ಅಂತ ಗಮನ ಕೊಡ್ತಿದ್ದಾರೆ. ರಕ್ಷಿತ್ ದೂರ ಆದ್ಮೇಲೆ ರಶ್ಮಿಕಾ ‘ಗೀತಾ ಗೋವಿದಂ’ನಲ್ಲಿ ಜೊತೆಯಾಗಿ ನಟಿಸಿದ್ದ ವಿಜಯ್ ದೇವರಕೊಂಡ ಜೊತೆ ಆಗಾಗ ಕಾಣಿಸಿಕೊಳ್ತಿದ್ದಾರೆ. ಗೀತಾ-ಗೋವಿದಂ ಸಿನಿಮಾದ ಲಿಪ್ ಲಾಕ್ ಸೀನ್ ವೈರಲ್ ಆದ ಟೈಮ್ ನಲ್ಲೇ ರಕ್ಷಿತ್- ರಶ್ಮಿಕಾ ಬ್ರೇಕಪ್ ಆಗಿದ್ರಿಂದ, ಈ ಮುತ್ತಿನ ಕಥೆಯೇ ಕಿರಿಕ್ ಜೋಡಿಯ ಬ್ರೇಕಪ್ ಗೆ ಕಾರಣ ಅಂತ ಹೇಳಲಾಗಿತ್ತು. ಆದಾದ್ಮೇಲೆ ಸಿಹಿ ಮುತ್ತಿನ ಕಥೆಗೂ ಈ ಬ್ರೇಕಪ್ ಗೂ ಸಂಬಂಧ ಇಲ್ಲ ಅನ್ನೋದು ಬಹುತೇಕ ಕನ್ಫರ್ಮ್ ಆಗಿದೆ. ಆದ್ರೆ, ಈ ಮೊದ್ಲೇ ಹೇಳ್ದಂತೆ ಕಾರಣ ಹೇಳಬೇಕಿರೋ ರಕ್ಷಿತ್-ರಶ್ಮಿಕಾ ಇಬ್ಬರೂ ಮೌನವಾಗಿದ್ದಾರೆ.
ರಶ್ಮಿಕಾ ಬಾಳಲ್ಲಿ ಹೊಸ ಹುಡ್ಗ ಬಂದಿದ್ದಾನೋ, ಇಲ್ಲವೋ ಗೊತ್ತಿಲ್ಲ. ಆದ್ರೆ, ರಕ್ಷಿತ್ ಲೈಫ್ ಗೆ ಮತ್ತೊಬ್ಬಳು ನಗುಮೊಗದ ಚೆಲುವೆ ಎಂಟ್ರಿಕೊಟ್ಟಿದ್ದಾಳೆ. ಅದು ಬೇರೆ ಯಾರೂ ಅಲ್ಲ, ಕನ್ನಡದ ಮೊನಾಲಿಸಾ..!

ಯಾರೀಕೆ ಕನ್ನಡದ ಮೊನಾಲಿಸಾ ಅಂದ್ರಾ..? ಇವರೇ ನಟಿ ಮೇಘನಾ ಗಾಂವ್ಕರ್. ಯಸ್, ರಕ್ಷಿತ್ ಶೆಟ್ಟಿ ಜೀವನಕ್ಕೆ ಮೇಘನಾ ಅನ್ನೋ ಚೆಲುವೆ ಎಂಟ್ರಿ ಕೊಟ್ಟಿದ್ದಾರೆ. ರಶ್ಮಿಕಾ ಜಾಗಕ್ಕೀಗ ಮೇಘನಾ ಬಂದಿದ್ದಾರೆ..! ರಶ್ಮಿಕಾ ರಶ್ಮಿಕಾ ಅಂತಿದ್ದ ರಕ್ಷಿತ್ ಈಗ ಮೇಘನಾ ಮೇಘನಾ ಅಂತಿದ್ದಾರೆ.
ಹೀಗೊಂದು ನ್ಯೂಸ್ ಹರಿದಾಡ್ತಾ ಇರೋದಕ್ಕೂ ಕಾರಣ ಇದೆ. ಬೆಂಕಿ ಇಲ್ದೆ ಹೊಗೆ ಆಡುತ್ತಾ..? ರಕ್ಷಿತ್- ಮೇಘನಾ ಪದೇ ಪದೇ ಸಭೆ, ಸಮಾರಂಭ, ಕಾರ್ಯಾಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ತಿದ್ದಾರೆ. ಇವರಿಬ್ಬರದ್ದು ಸ್ನೇಹವೋ, ಪ್ರೀತಿಯೋ ಅನ್ನೋದಕ್ಕೂ ಇವರೇ ಉತ್ತರ ಕೊಡ್ಬೇಕು. ಆದ್ರೆ, ಸದ್ಯ ಇಬ್ಬರ ನಡುವೆ ಲವ್ ಇದೆ ಅನ್ನೋದು ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ನ್ಯೂಸ್ ಕಂಡಾಪಟ್ಟೆ ವೈರಲ್ ಆಗ್ತಿದೆ.

RELATED ARTICLES

Related Articles

TRENDING ARTICLES