Friday, March 29, 2024

ಬಿಜೆಪಿ ಭದ್ರಕೋಟೆ ಛಿದ್ರ..!

ಬಳ್ಳಾರಿ ಲೋಕಸಭಾ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಮೈತ್ರಿ ಕ್ಯಾಂಡಿಡೇಟ್ ವಿ.ಎಸ್ ಉಗ್ರಪ್ಪ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಇದರೊಂದಿಗೆ ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಭೇದಿಸಿದೆ. ಶ್ರೀರಾಮುಲು ಹಾಗೂ ಬಿಜೆಪಿಗೆ ಇದರಿಂದ ತೀವ್ರ ಮುಖಭಂಗವಾಗಿದೆ.
ಬಳ್ಳಾರಿಯಲ್ಲಿ ವಿ.ಎಸ್ ಉಗ್ರಪ್ಪ ಅವರು 2,43,271 ಮತಗಳ ಅಂತರದ ಜಯಭೇರಿ ಬಾರಿಸುವುದರೊಂದಿಗೆ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ.
ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ ಅವರೆದರು ಬಿಜೆಪಿಯ ಜೆ. ಶಾಂತಾ ಪೈಪೋಟಿ ನೀಡದೇ ಸೋತಿದ್ದಾರೆ. ಉಗ್ರಪ್ಪ 6,28,163 ಹಾಗೂ ಜೆ. ಶಾಂತ 3,84,892 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಕ್ಯಾಂಡಿಡೇಟ್ ಪಂಪಾಪತಿ 7,697 ವೋಟ್ ಗಳನ್ನು ಪಡೆದಿದ್ದು, 12,413 ಮತಗಳು ನೋಟಾಕ್ಕೆ ಬಿದ್ದಿವೆ. 
1999ರ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಸೋನಿಯಾ ಗಾಂಧಿ, ಬಿಜೆಪಿ ಕ್ಯಾಂಡಿಡೇಟ್ ಸುಷ್ಮಾ ಸ್ವರಾಜ್ ವಿರುದ್ಧ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಗೆಲವು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಪ್ರಭಾವದಿಂದ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ಸೋಲನುಭವಿಸಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಮಂಕಾಗಿತ್ತು.

RELATED ARTICLES

Related Articles

TRENDING ARTICLES