ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದ ಪ್ರೊಡ್ಯೂಸರ್ ಆನಂದ್ ಅಪ್ಪುಗೋಳ್ ಅವರು ಮತ್ತೊಮ್ಮೆ ಅರೆಸ್ಟ್ ಆಗಿದ್ದಾರೆ. ರಾತ್ರೋ ರಾತ್ರಿ ಇವರನ್ನು ಅರೆಸ್ಟ್ ಮಾಡಲಾಗಿದೆ. ಇವರು ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೊಸೈಟಿಯಿಂದ ಬಹುಕೋಟಿ ಠೇವಣಿ ವಂಚನೆ ಮಾಡಿರೋ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.
ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ಹಣ ಠೇವಣಿ ಇಟ್ಟಿದ್ವಿ, ಆದ್ರೆ, ಆನಂದ್ ಅಪ್ಪುಗೋಳ್ ವಂಚನೆ ಮಾಡಿದ್ದಾರೆ ಅಂತ ಗ್ರಾಹಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಆನಂದ್ ಅಪ್ಪಗೋಳ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಅಪ್ಪುಗೋಳ್ ಸಾರ್ವಜನಿಕರ ಠೇವಣಿ ದುಡ್ಡನ್ನು ಸಕಾಲಕ್ಕೆ ಪಾವತಿ ಮಾಡ್ದೆ ಗ್ರಾಹಕರಿಗೆ ವಂಚಿಸಿದ್ದಾರೆ ಅಂತ ಬೆಳಗಾವಿಯ ಖಡೇಬಜಾರ್ ಠಾಣೆಯಲ್ಲಿ ಕಂಪ್ಲೇಂಟ್ ದಾಖಲಾಗಿತ್ತು. ಬಂಧನದ ಭೀತಿಯಲ್ಲಿ ಅಪ್ಪುಗೋಳ್ ತಲೆ ಮರೆಸಿಕೊಂಡಿದ್ರು. ಬಳಿಕ ಅವರನ್ನು ಸೆ.17 ರಂದು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ನಂತ್ರ ಧಾರವಾಡ ಸಂಚಾರಿ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
ರಾತ್ರೋ ರಾತ್ರಿ ‘ಸಂಗೊಳ್ಳಿ ರಾಯಣ್ಣ’ ಪ್ರೊಡ್ಯೂಸರ್ ಅರೆಸ್ಟ್..!
TRENDING ARTICLES