ಶಬರಿಮಲೆ ಅಯ್ಯಪ್ಪ ದೇವರೇ ಅಲ್ಲ..! ಹೀಗಂತ ಹೇಳಿದ್ದಾರೆ ನಟ ಪ್ರಕಾಶ್ ರೈ. ಗಲ್ಫ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಮಾತಾಡಿದ ಅವರು, ಮಹಿಳೆಯರನ್ನು ನೋಡದ ದೇವರು ದೇವರೇ ಅಲ್ಲ ಅಂದಿದ್ದಾರೆ.
ಹೆಣ್ಣೆಂದ್ರೆ ತಾಯಿ, ಭೂಮಿಯನ್ನು ನಾವು ಹೆಣ್ಣಿಗೆ ಹೋಲಿಸ್ತೀವಿ. ಹೀಗಿರುವಾಗ ಹೆಣ್ಣನ್ನು ಪೂಜೆಯಿಂದ ಹೊರಗಿಡುವುದರ ಅರ್ಥವೇನು ಅನ್ನೋದು ಪ್ರಕಾಶ್ ರೈ ಅವ್ರ ಪ್ರಶ್ನೆ.
ಶಬರಿಮಲೆಗೆ ಮಹಿಳೆಯರಿಗೆ ಅವಕಾಶ ಕೊಡ್ಲೇಬೇಕು. ಇದನ್ನು ತಡೆಯೋ ಹಕ್ಕು ಯಾರಿಗೂ ಇಲ್ಲ. ಯಾವ ದೇವರು ಮಹಿಳೆಯರನ್ನು ನೋಡುವುದಿಲ್ಲವೋ ಆ ದೇವರು ದೇವರೇ ಅಲ್ಲ ಅಂತ ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ತೀರ್ಪು ನೀಡಿದ ಬಳಿಕ ಇಬ್ಬರು ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ರು. ವಿರೋಧ ವ್ಯಕ್ತವಾಗಿದ್ರಿಂದ ದರ್ಶನ ಪಡೆಯದೇ ವಾಪಸ್ಸಾಗಿದ್ರು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇಂದು ಎರಡನೇ ಬಾರಿಗೆ ಶಬರಿಮಲೆ ಬಾಗಿಲು ತೆರೆಯುತ್ತಿದೆ.
ಅಯ್ಯಪ್ಪ ದೇವರೇ ಅಲ್ಲ ಎಂದ ಪ್ರಕಾಶ್ ರೈ..!
TRENDING ARTICLES