ಕಿರಿಕ್ ಹುಡ್ಗಿ ಅಂದ್ರೆ ಸಾಕು ಪಟ್ಟನೆ ನೆನಪಾಗೋದು ಇಬ್ಬರು ನಟಿಯರು. ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗ್ಡೆ. ಈ ಇಬ್ಬರಲ್ಲಿ ಮೊದಲು ನೆನಪಾಗೋ ಹೆಸ್ರು ರಶ್ಮಿಕಾ ಮಂದಣ್ಣ.
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಇವರಿಂದ ಟಾಲಿವುಡ್ ನಲ್ಲೂ ಬ್ಯೂಸಿ ಇರೋ ನಟಿ. ಕಿರಿಕ್ ಪಾರ್ಟಿ ನಂತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜೋಡಿಯಾಗಿ ‘ಅಂಜನಿಪುತ್ರ’ದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ಚಮಕ್’ ನಲ್ಲಿ ಸ್ಕ್ರೀನ್ ಶೇರ್ ಮಾಡ್ಕೊಂಡಿದ್ದ ರಶ್ಮಿಕಾ ನಂತರ ಟಾಲಿವುಡ್ ನಲ್ಲಿ ಬ್ಯುಸಿ ಆಗಿದ್ರು.
ಸದ್ಯ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗ ಬೇಕಿದೆ. ಇನ್ನು ಟಾಲಿವುಡ್ ನ ಬ್ಯುಸಿ ಶೆಡ್ಯೂಲ್ ನಡುವೆ ಸ್ಯಾಂಡಲ್ ವುಡ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ.
ಹೌದು ಕಿರಿಕ್ ಪಾರ್ಟಿಗೆ ಈಗ ಪೊಗರು..! ಅಂದ್ರೆ, ರಶ್ಮಿಕಾ ಧ್ರುವಾ ಸರ್ಜಾ ಅಭಿನಯದ ಪೊಗರು ಮೂವಿಗೆ ಹೀರೋಯಿನ್ ಆಗಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ನ ಮೊದಲ ಶೆಡ್ಯೂಲ್ ಮುಗಿದಿದೆ. ನವೆಂಬರ್ 20ರಿಂದ ಎರಡನೇ ಶೆಡ್ಯೂಲ್ ಆರಂಭವಾಗಲಿದ್ದು, ರಶ್ಮಿಕಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.