Sunday, July 14, 2024

ಹಾಸನಾಂಬೆ ದರ್ಶನಕ್ಕೆ ಭಕ್ತರೇ ಇಲ್ಲ..! ಕಳೆದ 5 ವರ್ಷಗಳಲ್ಲಿ ಇದೇ ಮೊದಲು ಹೀಗಾಗಿದ್ದು..!

ಹಾಸನದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಗ್ಗೆ ಕೇಳ್ದೇ ಇರೋರೆ ಇಲ್ಲ. ದೀಪಾವಳಿ ಟೈಮ್ ನಲ್ಲಿ ಮಾತ್ರ ಈ ದೇವಾಲಯ ತೆರೆಯುವುದರಿಂದ ಸಾಗರೋಪಾದಿಯಲ್ಲಿ ಭಕ್ತರು ನೆರೆಯುತ್ತಾರೆ. ಆದ್ರೆ, ಈ ಬಾರಿ ಹಾಸನಾಂಬೆ ಸನ್ನಿಧಿಗೆ ಭೇಟಿ ನೀಡಿದವರಿಗೆ ಖಂಡಿತಾ ಅಚ್ಚರಿ ಆಗುತ್ತೆ..! ಯಾಕಂದ್ರೆ ದೇವಿ ದರ್ಶನಕ್ಕೆ ಬರೋ ಭಕ್ತರ ಸಂಖ್ಯೆ ಸಂಪೂರ್ಣ ಇಳಿಮುಖ ಆಗಿದೆ.
ಹೌದು, ಕಳೆದ 5 ವರ್ಷಗಳಲ್ಲಿ ಎಂದೂ ಕಾಣದಷ್ಟು ಕಮ್ಮಿ ಭಕ್ತರು ಈ ಬಾರಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಪ್ರತಿದಿನ ದೇವಿ ದರ್ಶನ ಪಡೆಯುತ್ತಿದ್ದಾರೆ. ಬಾಗಿಲು ತೆರೆದಲ್ಲಿಂದ ಒಂದೂ ದಿನವೂ ಬಿಡದೇ ಭೇಟಿ ನೀಡುತ್ತಿರೋ ರೇವಣ್ಣ ಇಂದೂ ಕೂಡ ದೇವಿ ದರ್ಶನ ಪಡೆದ್ರು.

RELATED ARTICLES

Related Articles

TRENDING ARTICLES