Friday, July 19, 2024

ಬಿಯರ್ ಪ್ರಿಯರೇ ಹುಷಾರ್..! ಚಿಕ್ಕಮಗಳೂರಲ್ಲಿ ಪತ್ತೆಯಾಯ್ತು ಕಸ-ಕಡ್ಡಿ ತುಂಬಿದ ಬಿಯರ್..!

ನೀವು ಬಿಯರ್ ಪ್ರಿಯರೇ..ಹಾಗಾದ್ರೆ ನೀವು ಇದನ್ನು ಓದಲೇ ಬೇಕು. ನೈಟಲ್ಲಿ ಕಣ್ಮುಚ್ಕೊಂಡು ಬಿಯರ್ ಕುಡಿದ್ರೆ ಕಸ-ಕಡ್ಡಿ ಸಮೇತ ಗಲೀಜು ಬಿಯರ್ ಕುಡಿಯೋ ಚಾನ್ಸ್ ಇರುತ್ತೆ. ಮೊದಲೇ ಮದ್ಯ ಆರೋಗ್ಯಕ್ಕೆ ಹಾನಿಕರ, ಇನ್ನು ಕಸ-ಕಡ್ಡಿ ಮಿಶ್ರಿತ ಬಿಯರ್ ಕುಡಿದ್ರೆ ಆರೋಗ್ಯ ಪಕ್ಕಾ ಯಕ್ಕುಟ್ಟು ಹೋಗುತ್ತೆ.
ಇಷ್ಟೆಲ್ಲಾ ಹೇಳೋಕೆ ಸಾಕ್ಷಿ ಕೂಡ ಇದೆ. ಸುಮ್ ಸುಮ್ನೆ ನಿಮ್ಮನ್ನು ಭಯ ಪಡಿಸೋಕೆ ಹೇಳ್ತಿಲ್ಲ. ಚಿಕ್ಕಮಗಳೂರಲ್ಲಿ ಕಸ-ಕಡ್ಡಿ ತುಂಬಿದ್ದ ಬಿಯರ್ ಪತ್ತೆಯಾಗಿದೆ..! ಕಿಂಗ್ ಫಿಷರ್ ಬಿಯರ್ ನಲ್ಲಿ ಕಸ-ಕಡ್ಡಿ ಕಂಡು ಗ್ರಾಹಕ ಕಂಗಾಲಾಗಿದ್ದಾರೆ. ಪಾರ್ಟಿಗಂತ ಬಿಯರ್ ಕೊಂಡೋರಿಗೆ ಕಸ ಕಂಡು ಶಾಕ್ ಆಗಿದೆ. ಅದನ್ನು ವೀಡಿಯೋ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಲಕ್ಷ್ಮೀ ವೈನ್ಸ್ ನಲ್ಲಿ ಕೊಂಡ ಬಿಯರ್ ನಲ್ಲಿ ಈ ಕಸ-ಕಡ್ಡಿ ಸಿಕ್ಕಿರೋದು. ಈಗ ಗ್ರಾಹಕರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಲು ಮುಂದಾಗಿದ್ದಾರೆ.

https://www.facebook.com/powertvnews/videos/326559664806644/?t=8

RELATED ARTICLES

Related Articles

TRENDING ARTICLES