ಮಕ್ಕಳು ಹಠ ಮಾಡಿದಾಗ, ಅತ್ತಾಗ, ಊಟ ಬೇಡ ಅಂದಾಗ, ಚಾಕಲೇಟ್ ಆಸೆ ತೋರಿಸಿ, ಆಟಿಕೆ ಕೊಟ್ಟು ಸಮಾಧಾನ ಮಾಡೋ ಕಾಲ ಮುಗೀತು. ಈಗ ಏನೇ ಇದ್ರು, ಮೊಬೈಲ್ ಜಮಾನ..! ಅಳಬೇಡ ಕಂದ ಮೊಬೈಲು ಕೊಡುವೇನು ಅನ್ನೋ ಕಾಲ. ಆದ್ರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮಕ್ಕಳಿಗೆ ಆಟಿಕೆ ಕೊಟ್ಟು ಊಟ ಮಾಡಿಸೋ ಅಮ್ಮಂದಿರೇ ಇದನ್ನು ಮಿಸ್ ಮಾಡ್ದೆ ಓದಿ.
ಮಕ್ಕಳು ಊಟ ಮಾಡ್ಲಿಲ್ಲ ಅಂದ್ರೆ ಸಾಕು ಮೊಬೈಲ್ ನಲ್ಲಿ ಗೊಂಬೆ, ಹಾಡು ಹಾಕಿ ಮಕ್ಕಳಿಗೆ ಸಮಾಧಾನ ಪಡಿಸಿ, ಊಟ ಹಾಕೋ ಅಮ್ಮಂದಿರು ಈಗ ಜಾಸ್ತಿ.
ಹೇಗಾದ್ರು ಊಟ ಮಾಡಿದ್ರೆ ಸಾಕಪ್ಪ ಸಾಕು, ಅಳು ನಿಲ್ಲಿಸಿದ್ರೆ ಸಾಕಂತ ಮೊಬೈಲ್ ಕೊಟ್ಟು ಕೂರಿಸಿ ಬಿಡ್ತಾರೆ. ಮಕ್ಕಳು ಮೊಬೈಲ್ ಇಟ್ಕೊಂಡು ಆಡೋದನ್ನು ನೋಡೋದೇ ಎಷ್ಟೋ ಪೇರೆಂಟ್ಸ್ ಗೆ ದೊಡ್ಡ ಹೆಮ್ಮೆ ವಿಷ್ಯ ಆಗಿದೆ. ನೋಡ್ರೀ, ನಮ್ ಮಗ/ಳು ಇಷ್ಟು ಚಿಕ್ ವಯಸ್ಸಿಗೆ ನಮ್ಗಿಂತ ಎಷ್ಟು ಚೆನ್ನಾಗಿ ಮೊಬೈಲ್ ಯೂಸ್ ಮಾಡ್ತಾನೆ/ಳೆ ಅಂತ ಹೇಳ್ಕೋಂಡು ಖುಷಿ ಪಡ್ತಾರೆ ಅಮ್ಮಂದಿರು.
ಆದ್ರೆ, ಮೊಬೈಲ್ ಬಳಕೆ ಎಷ್ಟೊಂದು ಡೇಂಜರ್ ಅಂತ ಗೊತ್ತಿಲ್ಲ. ಪೋಷಕರೇ, ನಿಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ನೀವಾಗಿಯೇ ಅವರ ಲೈಫ್ ಹಾಳ್ ಮಾಡ್ತಿದ್ದೀರಿ. ಅವರ ಭವಿಷ್ಯ ನಿಮ್ಮಿಂದಲೇ ಹಾಳಾಗ್ತಿದೆ.
ಮೊಬೈಲ್ ಅತೀವ ಬಳಕೆಯಿಂದ ಬ್ರೈನ್ ಹೆಮರೇಜ್ ಬರುತ್ತೆ. ಚಿಕ್ಕ ವಯಸ್ಸಲ್ಲೇ ಹೆಚ್ಚು ಮೊಬೈಲ್ ಯೂಸ್ ಮಾಡೋದ್ರಿಂದ ಮಕ್ಕಳ ಕಣ್ಣಿನ ದೃಷ್ಠಿ ಮೇಲೂ ಪರಿಣಾಮ ಬೀರುತ್ತೆ. ಮೊಬೈಲ್ ಗೆ ಅಡಿಟ್ ಆಗ್ತಾ ಆಗ್ತಾ ಮಕ್ಕಳಿಗೆ ಹೊರ ಪ್ರಪಂಚವೇ ಬೇಡ ಅನ್ಸುತ್ತೆ. ಮೊಬೈಲೇ ಅವರ ಪ್ರಪಂಚ ಆಗಿಬಿಡುತ್ತೆ. ಸಂಬಂಧಗಳು, ಭಾವನೆಗಳನ್ನು ಕಳ್ಕೊಳ್ತಾರೆ. ಸಿಡುಕರಾಗ್ತಾರೆ. ಅವರಲ್ಲಿನ ಏಕಾಗ್ರತೆ ಶಕ್ತಿ ಕಮ್ಮಿ ಆಗುತ್ತೆ. ಹಾಗಾಗಿ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಿ.