ರಾಜ್ಯದಲ್ಲಿ 3 ಲೋಕಸಭಾ ಕ್ಷೇತ್ರ ಹಾಗೂ 2 ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಡೀತಾ ಇದೆ. ಇಂದು ಬಳ್ಳಾರಿ, ಮಂಡ್ಯ, ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೀತಾ ಇದೆ.
ಬಳ್ಳಾರಿಯಲ್ಲಿ ವಿ.ಎಸ್ ಉಗ್ರಪ್ಪಗೆ ಮತಹಾಕಿದ ಮತದಾರನೊಬ್ಬ ತಾನು ಉ್ರಗ್ರಪ್ಪ ಅವರಿಗೆ ವೋಟ್ ಮಾಡಿದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ಮತಗಟ್ಟೆ ಸಂಖ್ಯೆ 62ರಲ್ಲಿ ಮತಚಲಾಯಿಸಿದ ಹೊಸಪೇಟೆಯ ರಜಾಕ್ ಅನ್ನೋನೆ ಈ ಭೂಪ. ಈತ ಉಗ್ರಪ್ಪಗೆ ಮತಹಾಕಿ ಇ.ವಿ.ಎಂ ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಸಿಕ್ಕಿಬಿದ್ದಿದ್ದಾನೆ.
ಚುನಾವಣಾ ಅಧಿಕಾರಿ ಲೋಕೇಶ್ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗುಪ್ತ ಮತದಾನಕ್ಕೆ ವಿರೋಧವಾಗಿ ನಡೆದುಕೊಂಡ ರಜಾಕ್ ಈಗ ಪೊಲೀಸರ ಅತಿಥಿ.