Monday, December 9, 2024

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ ಆ 9 ಭಾರತೀಯರು ಯಾರು..?

2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾದ 9 ಮಂದಿ ಭಾರತೀಯರ ಹೆಸರನ್ನು ಬಹಿರಂಗ ಪಡಿಸುವಂತೆ ಬಿಸಿಸಿಐ ಆಡಳಿತ ಸಮಿತಿ.  ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದೆ.

ಐಪಿಎಲ್ ಸೀಸನ್ 6ರಲ್ಲಿ ನಡೆದ ಐಪಿಎಲ್ ಕಳ್ಳಾಟದ ತನಿಖೆ ನಡೆಸೋ ಹೊಣೆಯನ್ನು ನ್ಯಾ.ಮುಕುಲ್ ಮುದ್ಗಲ್ ಸಮಿತಿಗೆ ನೀಡಲಾಗಿತ್ತು. ಈ ಸಮಿತಿ 2014ರ ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ಗೆ ಸಮಗ್ರವಾದ ರಿಪೋರ್ಟ್ ನೀಡಿತ್ತು. ಈ ರಿಪೋರ್ಟ್ ನಲ್ಲಿ 9 ಕ್ರಿಕೆಟಿಗರ ಹೆಸರು ಆರೋಪಿಗಳ ಸ್ಥಾನದಲ್ಲಿತ್ತು.  ಆ ಹೆಸರುಗಳನ್ನು ಗೌಪ್ಯವಾಗಿಡಲಾಗಿತ್ತು. ಇದೀಗ ಸಿಒಎ ಕಳ್ಳಾಟದಲ್ಲಿ ಭಾಗಿಯಾದ 9 ಮಂದಿ ಹೆಸರನ್ನು ಹೇಳುವಂತೆ ಕೋರ್ಟ್ ನಲ್ಲಿ ಕೇಳಿಕೊಂಡಿದೆ. ಆರೋಪಿಗಳ ಪಟ್ಟಿ ಸಿಕ್ಕಲ್ಲಿ ಬಿಸಿಸಿಐ ಭಷ್ಟಾಚಾರ ನಿಗ್ರಹದಳಕ್ಕೆ ಸಹಕಾರಿ ಆಗಲಿದೆ ಅನ್ನೋದು ಇದರ ಉದ್ದೇಶ.

ಮುದ್ಗಲ್ ಕಮಿಟಿ ಈ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ 13 ಮಂದಿ ಹೆಸರನ್ನು ಸುಪ್ರೀಂಕೋರ್ಟ್ ಗೆ ನೀಡಿತ್ತು. ಇದ್ರಲ್ಲಿ ರಾಜಸ್ಥಾನ್ ರಾಯಲ್ಸ್ ಮಾಲೀಕ ರಾಜ್ ಕುಂದ್ರಾ, ಚೆನ್ನೈ ಸೂಪರ್ ಕಿಂಗ್ಸ್ ನ ಗುರುನಾಥ್ ಎನ್ ಶ್ರೀನಿವಾಸನ್ ಸುಂದರ್ ರಮಣ್ ಹೆಸರು ಬಹಿರಂಗವಾಗಿತ್ತು.  ಉಳಿದವರ ಹೆಸರು ಹೊರಬಂದಿಲ್ಲ.

 

RELATED ARTICLES

Related Articles

TRENDING ARTICLES