Wednesday, May 22, 2024

ನೀವೆಂದೂ ನೋಡಿರದ ಲುಕ್ ನಲ್ಲಿ ಶಾರೂಖ್, ಅನುಷ್ಕಾ..!

ಇವತ್ತು ಕಿಂಗ್ ಖಾನ್ ಶಾರೂಖ್ ಖಾನ್ ಅವ್ರಿಗೆ 53 ನೇ ಹುಟ್ಟುಹಬ್ಬದ ಸಂಭ್ರಮ. ಶಾರೂಖ್ ಹುಟ್ಟುಹಬ್ಬಕ್ಕೆ ಚಿತ್ರರಂಗ ಸೇರಿದಂತೆ  ನಾನಾ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಶುಭಕೋರಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.

 ಶಾರೂಖ್ ಖಾನ್ ಬರ್ತ್ ಡೇ ಗೆ ಅವ್ರ ಫ್ಯಾನ್ಸ್ ಗೆ ಸಿಕ್ಕ  ಗಿಫ್ಟ್ ‘ಝೀರೋ’ ಸಿನಿಮಾದ ಟ್ರೇಲರ್. ‘ಝೀರೋ ಸಿನಿಮಾ ಡಿಸೆಂಬರ್ 21ರಂದು ರಿಲೀಸ್ ಆಗ್ತಿದೆ. ಟ್ರೇಲರ್ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ.  ಶಾರೂಖ್ ಹುಟ್ಟುಹಬ್ಬದ ಗಿಫ್ಟ್ ರೂಪದಲ್ಲಿ  ರಿಲೀಸ್ ಆಗಿರೋ ಟ್ರೇಲರ್ ನೋಡಿರೋ ಅಭಿಮಾನಿಗಳು ಸಿನಿಮಾ ರಿಲೀಸ್ ಗೆ ತುದಿಗಾಲಲ್ಲಿ ನಿಂತಿರೋದು ಕನ್ಫರ್ಮ್. ಅಷ್ಟರಮಟ್ಟಿಗೆ ಟ್ರೇಲರ್ ಸಖತ್ತಾಗಿದೆ.

ಎಂದೂ ಕಾಣದ ಲುಕ್ ನಲ್ಲಿ ಕಿಂಗ್ ಖಾನ್ : 

ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಶಾರೂಖ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಶಾರೂಖ್ ಮತ್ತು ಅನುಷ್ಕಾ ನೀವೆಂದೂ ಕಾಣದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಈ ಚಿತ್ರದಲ್ಲಿ ವಿಶೇಷಚೇತನರಾಗಿ ಅಭಿನಯಿಸಿದ್ದು, ಅಭಿಮಾನಿಗಳ ಮನಮುಟ್ಟುವಂತಿದೆ.

ಈ ಚಿತ್ರಕ್ಕೆ ಆನಂದ್ ಎಲ್ ರೈ ಆ್ಯಕ್ಷನ್ ಕಟ್ ಹೇಳಿದ್ದು. ಗೌರಿ ಖಾನ್ ಬಂಡವಾಳ ಹಾಕಿದ್ದಾರೆ. ನೀವಿನ್ನೂ ಈ ಟ್ರೇಲರ್ ನೋಡಿಲ್ಲ ಅಂತಾದ್ರೆ, ಇಲ್ಲಿದೆ ನೋಡಿ.

RELATED ARTICLES

Related Articles

TRENDING ARTICLES