Thursday, March 28, 2024

ತ್ರಿವಳಿ ತಲಾಖ್ : ಸುಗ್ರೀವಾಜ್ಞೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ತ್ರಿವಳಿ ತಲಾಖ್ ನಿಷೇಧಕ್ಕೆ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸಮಸ್ತ ಕೇರಳ ಕಮಾಯ್ತ್ ಉಲೀಮಾ ಅನ್ನೋ ಮುಸ್ಲೀಂ ಸಂಘಟನೆ ತ್ರಿವಳಿ ತಲಾಖ್ ನಿಷೇಧ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಂಘಟನೆ ಇದು ಸಂವಿಧಾನದ ಆರ್ಟಿಕಲ್ 14,15 ಹಾಗೂ 21 ರ ಉಲ್ಲಂಘನೆ ಆಗುತ್ತೆ ಅಂತ ಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಸುಗ್ರೀವಾಜ್ಞೆ ಹೊರಡಿಸಿ 2 ತಿಂಗಳಾಗಿದ್ದು, ಇದರ ಅವಧಿ 6 ತಿಂಗಳಿದೆ. ಸದ್ಯದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ. ಸುಗ್ರೀವಾಜ್ಞೆ ವಿಷ್ಯದಲ್ಲಿ ಮಧ್ಯ ಪ್ರವೇಶಿಸೋ ಅಗತ್ಯ ಇಲ್ಲ ಅಂತ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪೀಠ ಹೇಳಿದೆ.

RELATED ARTICLES

Related Articles

TRENDING ARTICLES