Sunday, December 8, 2024

ರಾಮನಗರ ಬೈ ಎಲೆಕ್ಷನ್ ಮುಂದೂಡಿಕೆ..?

ನಾಳೆ (ನವೆಂಬರ್ 3) ರಾಜ್ಯದಲ್ಲಿ 3 ಲೋಕಾಸಭಾ ಕ್ಷೇತ್ರ ಮತ್ತು 2 ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ನಡೆಯಲಿದೆ. ಆದ್ರೆ, ರಾಮನಗರ ವಿಧಾನಸಭಾ ಕ್ಷೇತ್ರದ ಎಲೆಕ್ಷನ್ ಮುಂದೂಡಿಕೆ ಆಗಬಹುದು. ಯಾಕಂದ್ರೆ, ಬಿಜೆಪಿ ಕ್ಯಾಂಡಿಡೇಟ್ ಎಲ್. ಚಂದ್ರಶೇಖರ್ ಕೈ ಕೊಟ್ಟು ಚುನಾವಣಾ ಕಣದಿಂದ ಹಿಂದೆ ಸರಿದಿರೋದೇ ಇದಕ್ಕೆ ಕಾರಣ.
ಮತದಾನಕ್ಕೆ ಕೇವಲ 2 ದಿನ ಇರುವಾಗ ಚಂದ್ರಶೇಖರ್ ತೆಗೆದುಕೊಂಡ ಈ ನಿರ್ಧಾರದಿಂದ ಬಿಜೆಪಿ ಚುನಾವಣಾ ಮುಂದೂಡಿಕೆಗೆ ಮನವಿ ಮಾಡಿದೆ,
ರಾತ್ರೋ ರಾತ್ರಿ ಬಿಜೆಪಿ ಚುನಾವಣಾ ಆಯೋಗಕ್ಕೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಅಂತ ಕೇಳ್ಕೊಂಡಿದೆ. ಜೊತೆಗೆ ಎಲೆಕಲ್ಷನ್ ಮುಂದೂಡುವಂತೆ ಮನವಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಬಿಜೆಪಿ ಮುಖಂಡ ಚಿ.ನಾ ರಾಮು ಚುನಾವಣಾ ಆಯೋಗಕ್ಕೆ ಇ-ಮೇಲ್ ಮಾಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ನೇರವಾಗಿ ಆಯೋಗಕ್ಕೆ ಹೋಗಿ ದೂರು ಸಲ್ಲಿಸಲಿದ್ದಾರೆ ಅಂತ ತಿಳಿದುಬಂದಿದೆ.

RELATED ARTICLES

Related Articles

TRENDING ARTICLES