ಲೈಂಗಿಕ ಕಿರುಕುಳ ಆರೋಪ ಎದುರಿಸ್ತಿರೋ ಅರ್ಜುನ್ ಸರ್ಜಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅರ್ಜುನ್ ಸರ್ಜಾ ಸದ್ಯದ ಮಟ್ಟಿಗೆ ಅರೆಸ್ಟ್ ಆಗಲ್ಲ.
ಎಫ್ ಐಆರ್ ರದ್ದು ಕೋರಿ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 14 ಕ್ಕೆ ಮುಂದೂಡಿದೆ. ಇದು ಮೂರು ವರ್ಷದ ನಂತರ ದಾಖಲಾಗಿರೋ ಕೇಸ್ ಆಗಿರೋದ್ರಿಂದ ಇದಕ್ಕೆ ಸಂಬಂಧಪಟ್ಟಂತೆ ತರಾತುರಿ ಬೇಡ ಅಂತ ಕೋರ್ಟ್ ಹೇಳಿದೆ. ಅಷ್ಟೇ ಅಲ್ದೆ ಈ ವಿಚಾರಣೆ ಮುಗಿಯೋ ತನಕ ಅರ್ಜುನ್ ಸರ್ಜಾ ಅವ್ರನ್ನು ಅರೆಸ್ಟ್ ಮಾಡಬಾರದು. ಆದರೆ, ಪೊಲೀಸರು ತನಿಖೆ ನಡೆಸಬಹುದು ಅಂದಿದೆ.
ನಟಿ ಶ್ರುತಿ ಹರಿಹರನ್ ನೀಡಿದ ದೂರಿನ ಅನ್ವಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸರ್ಜಾ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ನಿರೀಕ್ಷಣಾ ಜಾಮೀನು ಮೊರೆ ಹೋಗದ ಸರ್ಜಾ ಎಫ್ ಐ ಆರ್ ರದ್ದುಪಡಿಸುವಂತೆ ಹೈಕೋರ್ಟ್ ನಲ್ಲಿ ಮನವಿ ಮಾಡಿದ್ರು. ಇಂದು ಈ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಕೋರ್ಟ್ ಗಡಿಬಿಡಿ ಬೇಡ ಅಂತ ವಿಚಾರಣೆಯನ್ನು ಮುಂದೂಡಿದೆ.
ವಿಸ್ಮಯ ಸಿನಿಮಾದ ರಿಹರ್ಸಲ್ ವೇಳೆಯಲ್ಲಿ, ಶೂಟಿಂಗ್ ಇಲ್ಲದ ಬಿಡುವಿನ ಟೈಮ್ ನಲ್ಲಿ ತನಗೆ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರೆಂದು ಶ್ರುತಿ #MeTooಅಡಿ ಆರೋಪಿಸಿದ್ದರು.
ಅರ್ಜುನ್ ಸರ್ಜಾಗೆ ರಿಲೀಫ್..!
TRENDING ARTICLES